ನವದೆಹಲಿ : ದೇಶದಲ್ಲಿ ಇಂದು ಹೊಸ ಶಕೆಗೆ ಬುನಾದಿ ಬೀಳಲಿದೆ. ವೀರ್ ಸಾವರ್ಕರ್ ಜಯಂತಿಯಾದ ನಾಳೆ (ಮೇ 28) ಹೊಸ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ಇದಕ್ಕಾಗಿ ಎಲ್ಲಾ ಸಿದ್ಧತೆಗಳು ನಡೆದಿವೆ. 96 ವರ್ಷದಷ್ಟು ಹಳೆಯದಾದ ಸಂಸತ್ ಭವನ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಇಲ್ಲದ ಕಾರಣ ಹೊಸ ಸಂಸತ್ ಭವನದ ಅಗತ್ಯ ಬಿದ್ದಿತ್ತು.
ಸೆಂಟ್ರಲ್ ವಿಸ್ತಾ ರಿ-ಡೆವಲಪ್ಮೆಂಟ್ ಪ್ರಾಜೆಕ್ಟ್ ಭಾಗವಾಗಿ ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಭವನವನ್ನು ಟಾಟಾ ಪ್ರಾಜೆಕ್ಟ್್ಸ ಕಂಪನಿ ಕೇವಲ ಎರಡೂವರೆ ವರ್ಷದಲ್ಲಿ ಅದ್ಭುತವಾಗಿ ನಿರ್ಮಿಸಿದೆ.
ಇದರ ವೀಡಿಯೋವನ್ನು ಶುಕ್ರವಾರ ಸಂಜೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಅನಾವರಣ ಮಾಡಿದ್ದರು. 2020ರ ಡಿಸೆಂಬರ್ 10ರಂದು ಪ್ರಧಾನಿ ಭೂಮಿಪೂಜೆ ನೆರವೇರಿಸಿದ್ದರು. ಇದೀಗ ನೂತನ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.