Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ವಿಪಕ್ಷಗಳ ಬಹಿಷ್ಕಾರ ಅಸ್ತ್ರಕ್ಕೆ ಪ್ರಧಾನಿ ಮೋದಿ ಕೌಂಟರ್

webdunia
ಶುಕ್ರವಾರ, 26 ಮೇ 2023 (09:56 IST)
ಭಾರತದ ವಿಪಕ್ಷಗಳನ್ನು ಆಸ್ಟ್ರೇಲಿಯಾದ ವಿಪಕ್ಷಗಳ ಜೊತೆ ಹೋಲಿಸಿ ತಿರುಗೇಟು ನೀಡಿದ್ದಾರೆ. 6 ದಿನಗಳ ಪ್ರವಾಸ ಮುಗಿಸಿ ಇಂದು ಭಾರತಕ್ಕೆ ಮರಳಿದ ಪ್ರಧಾನಿ ಮೋದಿ, ಆಸ್ಟ್ರೇಲಿಯಾದ ಆಡಳಿತ ಮತ್ತು ವಿರೋಧ ಪಕ್ಷಗಳೆಲ್ಲಾ ತಮ್ಮ ದೇಶಕ್ಕೆ ಮೊದಲ ಆದ್ಯತೆ ನೀಡುತ್ತವೆ ಎಂದಿದ್ದಾರೆ.
 
ಮೊನ್ನೆ ಬ್ರಿಸ್ಬೆನ್ನಲ್ಲಿ ಅನಿವಾಸಿ ಭಾರತೀಯರ ಸಭೆಯ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಒಂದು ಕಮ್ಯುನಿಟಿ ಇವೆಂಟ್ನಲ್ಲಿ ಆಡಳಿತ ಮತ್ತು ವಿಪಕ್ಷಗಳೆಲ್ಲಾ ಒಟ್ಟಾಗಿ ಪಾಲ್ಗೊಂಡಿದ್ವು. ಈ ಮೂಲಕ ಪ್ರಜಾಪ್ರಭುತ್ವದ ಸ್ಪೂರ್ತಿಯನ್ನು ಪ್ರದರ್ಶಿಸಿದ್ರು ಎಂದು ಹೇಳಿಕೊಂಡರು. ಈ ಮೂಲಕ ಪರೋಕ್ಷವಾಗಿ, ಇಲ್ಲಿನ ವಿಪಕ್ಷಗಳ ನಡೆ ಸರಿಯಿಲ್ಲ ಅಂತ ಟೀಕಿಸಿದ್ರು.

ಇನ್ನು, ಈ ಪ್ರಕರಣವೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮೋದಿ ಕೈಯಲ್ಲಿ ಉದ್ಘಾಟನೆ ಆಗೋದನ್ನು ತಡೀಬೇಕು ಎಂದು ವಕೀಲರೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ನೂತನ ಸಂಸತ್ ಭವನದಲ್ಲಿ ಭಾನುವಾರ ಬೆಳಗ್ಗೆ 7.30ರಿಂದ ಪೂಜಾ ಕಾರ್ಯಕ್ರಮಗಳು ಶುರುವಾಗಲಿವೆ. ಸಮಾರಂಭದಲ್ಲಿ ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಭಾಷಣವನ್ನು ಓದಲಾಗುತ್ತದೆ. ಸಂಜೆ ಕಾರ್ಯಕ್ರಮದ ಅಂತ್ಯದಲ್ಲಿ ಪ್ರಧಾನಮಂತ್ರಿಗಳು ಭಾಷಣ ಮಾಡಲಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಚೀತಾ ಮರಿಗಳ ಸಾವು : ಕಳೆದ ಎರಡು ತಿಂಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳ