Select Your Language

Notifications

webdunia
webdunia
webdunia
webdunia

ನಾಳೆಯಿಂದ ಈ ವಸ್ತುಗಳು ದುಬಾರಿ !

ನಾಳೆಯಿಂದ ಈ ವಸ್ತುಗಳು ದುಬಾರಿ !
ನವದೆಹಲಿ , ಭಾನುವಾರ, 17 ಜುಲೈ 2022 (08:46 IST)
ನವದೆಹಲಿ : ದಿನಬಳಕೆಯ ವಸ್ತುಗಳ ಮೇಲೆ ಜೆಎಸ್‍ಟಿ ಶೇ.5ರಷ್ಟು ಹೆಚ್ಚಳ ಸೋಮವಾರದಿಂದ ಜಾರಿಗೆ ಬರಲಿದೆ.

ಹೀಗಾಗಿ ಜನಸಾಮಾನ್ಯರಿಗೆ ನಾಳೆಯಿಂದ ದುನಿಯಾ ದುಬಾರಿ ಆಗಲಿದೆ. ಪ್ಯಾಕ್ ಮಾಡಿದ ಮೀನು, ಮಾಂಸ, ಮೊಸರು, ಜೇನು, ಬೆಲ್ಲ, ತರಕಾರಿ, ಗೋಧಿ ಸೇರಿ ಹಲವು ದಿನಸಿ ಪದಾರ್ಥಗಳ ಬೆಲೆ ಏರಿಕೆ ಆಗಲಿದೆ.

ಹೋಟೆಲ್ ರೂಂಗಳ ಬಾಡಿಗೆ, ವಾಣಿಜ್ಯ ಮಳಿಗೆಗಳ ಬಾಡಿಗೆಯೂ ಹೆಚ್ಚಾಗಲಿದೆ. ಜುಲೈ 18 ರಿಂದಲೇ ಜಿಎಸ್ಟಿ ಅನ್ವಯವಾಗಲಿದೆ. ಪ್ಯಾಕ್ ಮಾಡಿ ಲೇಬಲ್ ಮಾಡಿದ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ಹಲವಾರು ಉತ್ಪನ್ನಗಳಿಗೆ ತೆರಿಗೆ ವಿನಾಯಿತಿಯನ್ನು ಕೊನೆಗೊಳಿಸಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯಿಂದ ಅಧಿಸೂಚನೆ ಹೊರಡಿಸಿದೆ.

ನಿತ್ಯದ ಬಾಡಿಗೆ 1,000ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳಿಗೆ ಇದ್ದ ವಿನಾಯಿತಿ ರದ್ದಾಗಿ, ಇನ್ನೂ ಶೇ.12ರಷ್ಟು ತೆರಿಗೆ ಬೀಳಲಿದೆ. ದಿನಕ್ಕೆ 5000 ರೂ.1ಗಿ0ತ ಹೆಚ್ಚಿನ ಬಾಡಿಗೆ ವಿಧಿಸುವ ಸಾರ್ವಜನಿಕ ಧಾರ್ಮಿಕ ಕೆಂದ್ರಗಳು, ಮಾಸಿಕ 2500ರೂ.ಗಿಂತ ಹೆಚ್ಚಿನ ಬಾಡಿಗೆ ಇರುವ ವಾಣಿಜ್ಯ ಮಳಿಗೆಗಳಿಗೂ ಜಿಎಸ್ಟಿ ಜಾರಿಯಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಡಿಕೇರಿ , ಮಂಗಳೂರು ರಸ್ತೆ ಸಂಚಾರ ಬಂದ್