Select Your Language

Notifications

webdunia
webdunia
webdunia
webdunia

ಆಂಧ್ರ ಪ್ರದೇಶ ಸರ್ಕಾರದಿಂದ ನಿರೋದ್ಯೋಗಿ ಯುವಕರಿಗೊಂದು ಸಿಹಿಸುದ್ದಿ

ಆಂಧ್ರ ಪ್ರದೇಶ ಸರ್ಕಾರದಿಂದ ನಿರೋದ್ಯೋಗಿ ಯುವಕರಿಗೊಂದು ಸಿಹಿಸುದ್ದಿ
ಆಂಧ್ರಪ್ರದೇಶ , ಶುಕ್ರವಾರ, 1 ಜೂನ್ 2018 (13:58 IST)
ಆಂಧ್ರಪ್ರದೇಶ : ಆಂಧ್ರ ಪ್ರದೇಶ ಸರ್ಕಾರ  ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಈ ಮೂಲಕ  ನಿರೋದ್ಯೋಗ ಯುವಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.


ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರ ನಿರೋದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರತಿ ತಿಂಗಳು ಮಾಸಾಶನ ನೀಡಲು ನಿರ್ಧರಿಸಿದೆ.

ಈ ಬಗ್ಗೆ ತಿಳಿಸಿರುವ ಮಾಹಿತಿ ತಂತ್ರಜ್ಞಾನ ಸಚಿವ ಲೋಕೇಶ್ ಅವರು,’ ಆಂಧ್ರ ಸರ್ಕಾರವು 35 ವರ್ಷದೊಳಗಿನ ಪ್ರತಿ ಪದವೀಧರ ನಿರೋದ್ಯಗ ಯುವಕರಿಗೆ ಒಂದು ಸಾವಿರ ರೂ. ಮಾಸಾಶನ ನೀಡಲು ತೀರ್ಮಾನಿಸಿದೆ. ಇದು ಸುಮಾರು 10 ಲಕ್ಷ ನಿರೋದ್ಯೋಗ ಯುವಕರಿಗೆ ಅನುಕೂಲವಾಗಲಿದೆ. ಈ ಯೋಜನೆ ಲಾಭ ಪಡೆಯಲು ಯಾವುದೇ ಕಟ್ಟುಪಾಡುಗಳಿಲ್ಲ. ಒಂದು ಕುಟುಂಬದಲ್ಲಿ ಇಬ್ಬರು ಪದವೀಧರ ನಿರೋದ್ಯೋಗಿದ್ದರೆ ಇಬ್ಬರೂ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ಪ್ಲೇ ಸ್ಟೋರ್ ನಿಂದ ಪತಂಜಲಿಯ `ಕಿಂಭೊ' ಮೆಸೇಜಿಂಗ್ ಆ್ಯಪ್ ಡಿಲೀಟ್ ಆಗಲು ಕಾರಣವೇನು?