Select Your Language

Notifications

webdunia
webdunia
webdunia
webdunia

ನದಿಗಳ ಮರಳನ್ನು ಮಾರುವಂತಿಲ್ಲ : ಎನ್‌ಜಿಟಿ

ನದಿಗಳ ಮರಳನ್ನು ಮಾರುವಂತಿಲ್ಲ : ಎನ್‌ಜಿಟಿ
ಚೆನ್ನೈ , ಶನಿವಾರ, 21 ಮೇ 2022 (11:15 IST)
ಚೆನ್ನೈ : ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಗೆ ಬರುವ ನದಿಗಳಲ್ಲಿ ತೆಗೆದ ಮರಳನ್ನು ಮಾರುವಂತಿಲ್ಲ.

ಬದಲಿಗೆ ಕೆಳಮಟ್ಟದ ನದಿ ತಟಗಳನ್ನು ಸಮತೋಲನ ಮಾಡಲು, ತೀರ ಪ್ರದೇಶದಲ್ಲಿ ಮರಳು ಪೋಷಣೆಗೆ, ನದಿ ತಡೆಗೋಡೆಗಳ ಬಲವರ್ಧನೆಗೆ ಅಷ್ಟೇ ಈ ಮರಳನ್ನು ಬಳಸಬಹುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಚೆನ್ನೈ ಪೀಠ ಮಹತ್ವದ ಆದೇಶ ನೀಡಿದೆ.

ಈ ಆದೇಶ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅನ್ವಯ ಆಗಲಿದೆ. 2017ರಲ್ಲಿ ಬ್ರಹ್ಮಾವರದ ಉದಯ್ ಸುವರ್ಣ ಮತ್ತು ಉಡುಪಿಯ ದಿನೇಶ್ ಕುಂದರ್ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎನ್ಜಿಟಿ, ಶುಲ್ಕ ಸಂಗ್ರಹಿಸಿ ನದಿಯಲ್ಲಿ ಮರಳುಗಾರಿಕೆ ಮಾಡುವ ಪದ್ದತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೂಚಿಸಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ!