Select Your Language

Notifications

webdunia
webdunia
webdunia
webdunia

ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ!

ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ!
ಮಾಸ್ಕೋ , ಶನಿವಾರ, 21 ಮೇ 2022 (10:53 IST)
ಮಾಸ್ಕೋ : ನ್ಯಾಟೋಗೆ ಸೇರಲು ಮುಂದಾದ ಫಿನ್ಲೆಂಡ್ಗೆ ರಷ್ಯಾ ಈಗ ಶಾಕ್ ಕೊಟ್ಟಿದೆ.
 
ಇಂದಿನಿಂದ ಫಿನ್ಲೆಂಡ್ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ. ರಷ್ಯಾ-ಉಕ್ರೇನ್ ಯುದ್ಧದ ನಡುವೆ ನ್ಯಾಟೋ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ ಫಿನ್ಲೆಂಡ್ ರುಬೆಲ್ನಲ್ಲಿ ಪಾವತಿಸುವ ಷರತ್ತನ್ನು ನಿರಾಕರಿಸಿತ್ತು.

ಈ ಕಾರಣಕ್ಕೆ ರಷ್ಯಾ ಫಿನ್ಲೆಂಡ್ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ ಎಂದು ಫಿನ್ನಿಷ್ ಸರ್ಕಾರಿ ಸ್ವಾಮ್ಯದ ಕಂಪೆನಿ ಹೇಳಿದೆ.

ಉಕ್ರೇನ್ನಲ್ಲಿನ ಯುದ್ಧದಿಂದಾಗಿ ರಷ್ಯಾದ ಕಚ್ಚಾತೈಲಗಳ ಮೇಲೆ ಯುರೋಪಿಯನ್ ಒಕ್ಕೂಟಗಳು ರಷ್ಯಾಮೇಲೆ ನಿರ್ಬಂಧ ಹೇರಲು ಮುಂದಾಗಿದ್ದವು.

ಈ ವೇಳೆ ಸ್ನೇಹಪರವಲ್ಲದ ವಿದೇಶಿ ಖರೀದಿದಾರರು ರಷ್ಯಾದ ಕರೆನ್ಸಿಯಲ್ಲೇ ಗ್ಯಾಸ್ಗೆ ಖರೀದಿಸಬೇಕು ಎಂದು ರಷ್ಯಾ ಒತ್ತಾಯಿಸಿತ್ತು. ಫಿನ್ಲೆಂಡ್ ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ರಷ್ಯಾ ಈ ಕ್ರಮಕೈಗೊಂಡಿರುವುದು ವಿಶೇಷ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವದಲ್ಲೇ ಭಾರತ ನಂ.1