Select Your Language

Notifications

webdunia
webdunia
webdunia
webdunia

ಮೈಸೂರು ಭಾಗದ ಜನರಿಗೆ ಸಿಹಿಸುದ್ದಿ

ಮೈಸೂರು ಭಾಗದ ಜನರಿಗೆ ಸಿಹಿಸುದ್ದಿ
ಮೈಸೂರು , ಶುಕ್ರವಾರ, 5 ನವೆಂಬರ್ 2021 (16:00 IST)
ಗೋವಾ ಪ್ರವಾಸಕ್ಕೆ ತೆರಳಲು ಬಯಸುವ ಮೈಸೂರು ಕರ್ನಾಟಕ ಭಾಗದ ಜನರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಿಹಿಸುದ್ದಿ ನೀಡಿದೆ.
ಇವತ್ತಿನಿಂದ ಮೈಸೂರು ಮತ್ತು ಗೋವಾ ರಾಜಧಾನಿ ಪಣಜಿ ನಡುವೆ ನೂತನ ವೇಗದೂತ ಬಸ್ ಸಂಚಾರ ಆರಂಭವಾಗಲಿದೆ. ಮೈಸೂರು ಮತ್ತು ಪಣಜಿವರೆಗೂ ಈ ವೇಗದೂತ ಬಸ್ ಯಾವ ಮಾರ್ಗದಲ್ಲಿ ಸಂಚರಿಸಲಿದೆ, ಎಷ್ಟು ಗಂಟೆಗೆ ಯಾವ ನಿಲ್ದಾಣವನ್ನು ತಲುಪಲಿದೆ, ಯಾವ ಸಮಯದಲ್ಲಿ ಯಾವ ನಿಲ್ದಾಣದಿಂದ ನಿರ್ಗಮಿಸಲಿದೆ ಎಂಬುದರ ಕುರಿತು ಒಂದು ವಿವರಣಾತ್ಮ ಮಾಹಿತಿಯನ್ನು ಕೆಎಸ್ಆರ್ಟಿಸಿ ತನ್ನ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ. ಮೈಸೂರಿನಿಂದ- ನಾಗಮಂಗಲ - ಹುಳಿಯಾರ್ - ಹೊಸದುರ್ಗ - ಹೊಳಲ್ಕೆರೆ - ದಾವಣಗೆರೆ - ಹುಬ್ಬಳ್ಳಿ ಮಾರ್ಗವಾಗಿ ಪಣಜಿಗೆ ಈ ನೂತನ ವೇಗದೂತ ಸಾರಿಗೆ ಸಂಚರಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ಸಿಟಿಯಲ್ಲಿ ಧಾರಾಕಾರ ಮಳೆ!