Select Your Language

Notifications

webdunia
webdunia
webdunia
webdunia

ಜೈಲಿನಲ್ಲಿರುವ ಶಶಿಕಲಾಗೆ ರಾಜಾತಿಥ್ಯ ನೀಡಲು ಹೇಳಿದ್ದೇ ಸಿಎಂ - ಮಾಜಿ ಡಿಜಿಪಿ

ಜೈಲಿನಲ್ಲಿರುವ ಶಶಿಕಲಾಗೆ ರಾಜಾತಿಥ್ಯ ನೀಡಲು ಹೇಳಿದ್ದೇ ಸಿಎಂ - ಮಾಜಿ ಡಿಜಿಪಿ
ಬೆಂಗಳೂರು , ಬುಧವಾರ, 7 ಮಾರ್ಚ್ 2018 (17:31 IST)
ಅಕ್ರಮ ಆಸ್ತಿ ಗಳಿಕೆಯಲ್ಲಿ ಜೈಲು ಸೇರಿರೋ ಶಶಿಕಲಾ ನಟರಾಜನ್‍ಗೆ ರಾಜಾತಿಥ್ಯ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸೂಚಿಸಿರುವುದಾಗಿ ನಿವೃತ್ತ ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ಆರೋಪ ಮಾಡಿದ್ದಾರೆ.
ಜೈಲಲ್ಲಿ ಹಾಸಿಗೆ, ದಿಂಬು ಕೊಡುವಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಖುದ್ದು ಕರೆದು ಸೂಚಿಸಿದ್ದರು. ಆದ್ರೆ ಇಂತಹ ಐಷಾರಾಮಿ ಸೌಲಭ್ಯ ನೀಡಲು ನನಗೆ ಅಧಿಕಾರವಿಲ್ಲವೆಂದರೂ ಸಿದ್ದರಾಮಯ್ಯ ಅವರು ಬಿಡಲಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ಆದೇಶದಂತೆ ನಾನು ಐಷಾರಾಮಿ ಸೌಲಭ್ಯ ನೀಡಿದ್ದೇನೆ. ಇದರಲ್ಲಿ ನನ್ನ ತಪ್ಪೇನಿಲ್ಲ ಅಂತ ನಿವೃತ್ತ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಸಮಿತಿ ಎದುರು ಸತ್ಯನಾರಾಯಣ ರಾವ್ ಹೇಳಿದ್ದಾರೆ.
 
 
ಶಶಿಕಲಾಗೆ ವಿಐಪಿ ಟ್ರೀಟ್ ಮೆಂಟ್:  ಸಿಎಂ ಹೇಳಿದ್ದೇನು?
 
ಅಕ್ರಮ ಆಸ್ಥಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ  ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ಗೆ ವಿಐಪಿ ಟ್ರೀಟ್ ಮೆಂಟ್ ನೀಡಲು ಸ್ವತಃ ಸಿಎಂ ಸೂಚಿಸಿದ್ರಾ?
 
ಈ ಬಗ್ಗೆ ತನಿಖಾಧಿಕಾರಿಗಳ ಮುಂದೆ ಡಿಜಿಪಿ ಸತ್ಯನಾರಾಯಣ ರಾವ್ ನೀಡಿದ ಹೇಳಿಕೆ ವಿವಾದಕ್ಕೀಡುಮಾಡಿದೆ. ಶಶಿಕಲಾಗೆ ಜೈಲಿನಲ್ಲಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ತಂಡ ನಿಯೋಜಿಸಿತ್ತು. ಈ ಬಗ್ಗೆ ಡಿಜಿಪಿಯವರನ್ನು ವಿಚಾರಣೆ ನಡೆಸಿದಾಗ ಸಿಎಂ ಸೂಚನೆಯಂತೆ ಶಶಿಕಲಾಗೆ ಹಾಸಿಗೆ ದಿಂಬು ನೀಡಲಾಗುತ್ತಿದೆ ಎಂದಿದ್ದರು.
 
ಈ ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ‘ತಮಿಳುನಾಡಿನಿಂದ ಬಂದ ನಿಯೋಗವೊಂದು ನನ್ನ ಬಳಿ ಶಶಿಕಲಾಗೆ ಕನಿಷ್ಠ ಸೌಲಭ್ಯವನ್ನೂ ಜೈಲಿನಲ್ಲಿ ನೀಡಲಾಗಿಲ್ಲ ಎಂದಿತ್ತು. ಹೀಗಾಗಿ ಡಿಜಿಪಿ ಸತ್ಯನಾರಾಯಣ ರಾವ್ ರನ್ನು ಕರೆದು ಜೈಲಿನ ಮ್ಯಾನ್ಯುವಲ್ ಪ್ರಕಾರ ಏನು ಸೌಲಭ್ಯ ಕೊಡಬಹುದೋ ಅದನ್ನು ಕೊಡಬಹುದು ಎಂದಿದ್ದೆ ಅಷ್ಟೇ. ವಿಶೇಷ ಸೌಲಭ್ಯ ಕೊಡಿ ಎಂದಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು