Publish Date: Wed, 07 Mar 2018 (10:52 IST)
Updated Date: Wed, 07 Mar 2018 (10:54 IST)
ಬೆಂಗಳೂರು: ಮಂಗಳೂರಿನ ನೆಹರೂ ಮೈದಾನದಲ್ಲಿ ನಿನ್ನೆ ಬಿಜೆಪಿ ಯಾತ್ರೆಯ ಸಮಾವೇಶ ಸಮಾರಂಭ ನಡೆದಿತ್ತು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಆದರೆ ಸಮಾರಂಭಕ್ಕೆ ಬಂದವರು ಪಕ್ಕದಲ್ಲೇ ಇದ್ದ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಮಾಡಿಕೊಂಡು ಹೋಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
‘ನಾವು ಮನುಷ್ಯ ಪ್ರೇಮಿಗಳು. ಅವರು ಮನುಷ್ಯ ವಿರೋಧಿಗಳು. ಇದರಿಂದಾಗಿಯಾ ನಾವು ಹೀಗೆ. ಅವರು ಹಾಗೆ. ಉಂಡವನು ಶತ್ರುವಾದರೂ ಅವರ ಹೊಟ್ಟೆ ತಣ್ಣಗಿರಲಿ’ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ