Select Your Language

Notifications

webdunia
webdunia
webdunia
webdunia

ಬಿಜೆಪಿ, ಕೆಪಿಜೆಪಿ ಬೇಡ ಕಾಂತ.. ನಂದೇ ಪಾರ್ಟಿ ಮಾಡ್ತೀನಿ ಕಾಂತಾ.. ಅಂದರು ಉಪೇಂದ್ರ!

ಬಿಜೆಪಿ, ಕೆಪಿಜೆಪಿ ಬೇಡ ಕಾಂತ.. ನಂದೇ ಪಾರ್ಟಿ ಮಾಡ್ತೀನಿ ಕಾಂತಾ.. ಅಂದರು ಉಪೇಂದ್ರ!
ಬೆಂಗಳೂರು , ಮಂಗಳವಾರ, 6 ಮಾರ್ಚ್ 2018 (13:28 IST)
ಬೆಂಗಳೂರು: ಇನ್ನು ಮುಂದೆ ನನಗೂ ನನ್ನ ಬೆಂಬಲಿಗರಿಗೂ ಕೆಪಿಜೆಪಿ ಜತೆ ಯಾವುದೇ ಸಂಬಂಧವಿಲ್ಲ. ನಾವೆಲ್ಲರೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇವೆ. ಬೆಂಬಲಿಗರ ಸಹಾಯದೊಂದಿಗೆ ಹೊಸ ಪಕ್ಷ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಉಪೇಂದ್ರ ತಮ್ಮ ರೆಸಾರ್ಟ್ ನಲ್ಲಿ ಮಾಧ್ಯಮಗಳಿಗೆ ಹೇಳಿದ್ದಾರೆ.

ನಮ್ಮ ಹೊಸ ಪಕ್ಷ ಪ್ರಜಾಕೀಯ ಪರಿಕಲ್ಪನೆಯಲ್ಲಿರುತ್ತದೆ. ಆದಷ್ಟು ಬೇಗ ಹೊಸ ಪಕ್ಷ ಸ್ಥಾಪನೆ ಮಾಡುತ್ತೇವೆ. ಇಂದಿನಿಂದಲೇ ಆ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಜನರಿಗೆ ಬೇಕಾದ ಆರೋಗ್ಯ, ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಕೊಡಿಸುವುದೇ ನಮ್ಮ ಗುರಿಯಾಗಿರುತ್ತದೆ. ನಮ್ಮ ಪ್ರಣಾಳಿಕೆ, ಅಭ್ಯರ್ಥಿಗಳು ಎಲ್ಲರೂ ರೆಡಿ ಇದ್ದಾರೆ. ಈ ಚುನಾವಣೆಯಲ್ಲೇ ಎಲ್ಲಾ ಸ್ಥಾನಗಳಲ್ಲೂ ಸ್ಪರ್ಧಿಸುತ್ತೇವೆ ಎಂದು ಉಪೇಂದ್ರ ಸ್ಪಷ್ಟವಾಗಿ ಹೇಳಿದ್ದಾರೆ.

ಹೀಗಾಗಿ ಈ ಚುನಾವಣೆಗೆ ಮೊದಲು ತಮ್ಮ ಬೆಂಬಲಿಗರ ಜತೆ ಹೊಸ ಪಕ್ಷದೊಂದಿಗೆ ಸಕ್ರಿಯ ರಾಜಕಾರಣಕ್ಕೆ ಉಪೇಂದ್ರ ಮರಳಲಿದ್ದಾರೆ. ಬೆಂಬಲಿಗರ ಜತೆ ತಮ್ಮ ರೆಸಾರ್ಟ್ ನಲ್ಲಿ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೇಲುಕೋಟೆಯಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಕೆಸ್ ಪುಟ್ಟಣ್ಣಯ್ಯ ಸ್ಥಾನದಲ್ಲಿ ದರ್ಶನ್ ಸ್ಪರ್ಧೆ!