Publish Date: Tue, 06 Mar 2018 (09:26 IST)
Updated Date: Tue, 06 Mar 2018 (09:28 IST)
ಮಂಡ್ಯ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ದರ್ಶನ್ ಸ್ಪರ್ಧಿಸಲಿರುವುದು ಬಹುತೇಕ ಖಚಿತವಾಗಿದೆ.
ಆದರೆ ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲ. ಮೊನ್ನೆಯಷ್ಟೇ ತೀರಿಕೊಂಡ ಕರ್ನಾಟಕ ಸರ್ವೋದಯ ಪಕ್ಷದ ನಾಯಕ, ರೈತ ನಾಯಕ ಕೆಎಸ್ ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ.
ದರ್ಶನ್ ತಮ್ಮ ತಂದೆಯ ಕ್ಷೇತ್ರದಲ್ಲಿ, ತಂದೆಯ ಪಕ್ಷದಿಂದ ಸ್ಪರ್ಧಿಸಲಿರುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ದರ್ಶನ್ ಚುನಾವಣೆಗೆ ನಿಂತರೆ ಕಾಂಗ್ರೆಸ್ ಕೂಡಾ ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ತನ್ನ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸದೇ ಬೆಂಬಲಿಸಲಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Tue, 06 Mar 2018 (09:26 IST)
Updated Date: Tue, 06 Mar 2018 (09:28 IST)