Publish Date: Sat, 24 Mar 2018 (16:08 IST)
Updated Date: Sat, 24 Mar 2018 (16:09 IST)
ಕಳೆದ 5 ವರ್ಷದಿಂದ ಕರ್ನಾಟಕದಲ್ಲಿ ನಾವು ಆಡಳಿತ ಮಾಡಿದ್ದೇವೆ ಚಾಮರಾಜನಗರ ಜಿಲ್ಲೆಯನ್ನ ಕಾಂಗ್ರೆಸ್ ಭದ್ರಕೋಟೆ ಮಾಡಿಕೊಂಡಿದ್ದೀರಿ. ಜಿಲ್ಲೆಗೆ ಅತೀ ಹೆಚ್ಚು ಅನುಧಾನ ನೀಡಿದ್ದೇವೆ. ದಿವಂಗತ ಮಹದೇವಪ್ರಸಾದ್ ಜಿಲ್ಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳ ಕಡೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದರು.
ಚಾಮರಾಜನಗರದ ಜನಾಶ್ರೀವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿ, ಜಿಲ್ಲೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ಬಿ.ಜೆ.ಪಿ ಯವರು ನಮ್ಮ ಸರ್ಕಾರದ ಬಗ್ಗೆ ಮಾತ್ನಾಡ್ತಾರೆ ,ಆದರೇ ಮೋದಿಯವರು ಪಕ್ಕದಲ್ಲೆ ಯಡಿಯೂರಪ್ಪನ್ನು ಇಟ್ಕೊಂಡಿದ್ದಾರೆ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಬಿ.ಜಿ.ಪಿ ಯವರಿಗೆ ನಾಲಿಗೆ ಸರಿಯಿಲ್ಲ ,ಎರಡು ತಲೆ ನಾಗರಹಾವು ಇದ್ದಂತೆ ಎಂದು ಕಿಡಿಕಾರಿದರು.
ನಾನು ಚಾಮರಾಜನಗರ ಕ್ಕೆ 9 ಬಾರಿ ಬಂದಿದ್ದೇನೆ. ಇಲ್ಲಿಗೆ ಬಂದಮೇಲೆ ನನ್ನ ಕುರ್ಚಿ ಬದ್ರ ಆಗಿದ್ದು ಅದಕ್ಕೆ ನಾನು ಜಿಲ್ಲೆಗೆ ಹೆಚ್ಷಿನ ಆದ್ಯತೆ ನೀಡಿದ್ದೇನೆ.ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ಯಾಗಬೇಕಾದರೇ ಮತ್ತೇ ನಮ್ಮ ಕಾಂಗ್ರೆಸ್ ಸರ್ಕಾರವನ್ನ ಬೆಂಬಲಿಸಿ ನವಕರ್ನಾಟಕ ನಿರ್ಮಾಣಕ್ಕೆ ತಮ್ಮೆಲ್ಲರ ಆಶಿರ್ವಾದ ಬೇಕಾಗಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಮತದಾರರಲ್ಲಿ ಕೋರಿದರು.