Webdunia - Bharat's app for daily news and videos

Install App

GSLV-F10 ರಾಕೆಟ್ನಲ್ಲಿ ತಾಂತ್ರಿಕ ದೋಷ; ಮಿಷನ್ ಪೂರ್ಣಗೊಳ್ಳಲು ವಿಫಲ

Webdunia
ಗುರುವಾರ, 12 ಆಗಸ್ಟ್ 2021 (09:41 IST)
ಬೆಂಗಳೂರು, ಆ. 12: ಅನೇಕ ಸಾಹಸಗಾಥೆಗಳ ಇತಿಹಾಸ ಹೊಂದಿರುವ ಇಸ್ರೋದ ಜಿಎಸ್ಎಲ್ವಿ ರಾಕೆಟ್ ಇಂದು ತನ್ನ ಮಿಷನ್ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸ್ಪೇಸ್ಪೋರ್ಟ್ನಿಂದ ಬೆಳಗ್ಗೆ ಜಿಎಸ್ಎಲ್ವಿ ಎಫ್10 (GSLV-F10) ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡರು ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಸೆಟಿಲೈಟನ್ನು ನಿಗದಿತ ಜಾಗಕ್ಕೆ ಬಿಡಲು ವಿಫಲಗೊಂಡಿದೆ. ತಾಂತ್ರಿಕ ದೋಷ ಇದಕ್ಕೆ ಕಾರಣ ಎನ್ನಲಾಗಿದೆ.

ಎಂ EOS-3 ಬ ಭೂ ವೀಕ್ಷಣಾ ಸೆಟಿಲೈಟನ್ನ (Earth Observation Satellite) ರಾಕೆಟ್ ಹೊತ್ತೊಯ್ದಿತ್ತು.
ಬೆಳಗ್ಗೆ ನಿಗದಿಯಂತೆ 5:43ಕ್ಕೆ ಜಿಯೋ ಸಿಂಕ್ರೋನಸ್ ಸೆಟಿಲೈಟ್ ಲಾಂಚ್ ವೆಹಿಕಲ್ ತಂತ್ರಜ್ಞಾನದ 51.70 ಮೀಟರ್ ಎತ್ತರದ ಎಫ್10 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತು. ಅದಾದ ಬಳಿಕ ಮೊದಲ ಹಾಗೂ ಎರಡನೇ ಹಂತವೂ ಯಶಸ್ವಿಯಾಗಿ ನಡೆಯಿತು. ಆದರೆ, ತಾಂತ್ರಿಕ ದೋಷದಿಂದಾಗಿ ಕ್ರಯೋಜೆನಿಕ್ ಎಂಜಿನ್ನ ಮೇಲಿನ ಮಟ್ಟದಲ್ಲಿ (Cryogenic Upper Stage) ನಿಶ್ಚಿತ ರೀತಿಯಲ್ಲಿ ಕಿಡಿ (ignition) ಹೊತ್ತಲಿಲ್ಲ. ಹೀಗಾಗಿ, ಸೆಟಿಲೈಟನ್ನು ನಿಗದಿತ ಕಕ್ಷೆಗೆ ಸೇರಿಸಲು ರಾಕೆಟ್ ವಿಫಲಗೊಂಡಿತೆನ್ನಲಾಗಿದೆ.
ರಾಕೆಟ್ನೊಳಗೆ ಇದ್ದ ಭೂ ವೀಕ್ಷಣಾ ಸೆಟಿಲೈಟ್ ಬಹಳ ಮುಖ್ಯವಾದ ಮಿಷನ್ ಹೊಂದಿದೆ. ಇದು ನೈಸರ್ಗಿಕ ವಿಕೋಪ ದುರಂತಗಳು ಸಂಭವಿಸಿದಾಗ ಬಹಳ ತ್ವರಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಲು ನೆರವಾಗಬಲ್ಲುದು. ರಿಯಲ್ ಟೈಮ್ನಲ್ಲಿ ದುರಂತದ ಪ್ರದೇಶಗಳ ಚಿತ್ರಗಳನ್ನ ಇದು ಆಗಾಗ್ಗೆ ಒದಗಿಸುತ್ತದೆ. ಪ್ರಕೃತಿ ವಿಕೋಪ ಘಟನೆಗಳ ಮುನ್ಸೂಚನೆ, ಚಂಡಮಾರುತದ ಪರಿಶೀಲನೆ, ಮೇಘ ಸ್ಫೋಟ, ಸಿಡಿಲು ಇತ್ಯಾದಿ ದುರಂತಗಳನ್ನ ಸಮರ್ಕಪವಾಗಿ ಪರಿಶೀಲನೆ ನಡೆಸಲು ಇದು ನೆರವಾಗುತ್ತದೆ. ಈ ಅರ್ತ್ ಅಬ್ಸರ್ವೇಶನ್ ಸೆಟಿಲೈಟ್ 10 ವರ್ಷದ ಜೀವಿತಾವಧಿ ಹೊಂದಿದೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments