Select Your Language

Notifications

webdunia
webdunia
webdunia
Friday, 4 April 2025
webdunia

ಬಾಹ್ಯಾಕಾಶದಲ್ಲಿ ಭಾರತದ ಮತ್ತೊಂದು ಸಾಹಸಕ್ಕೆ ಕ್ಷಣಗಣನೆ

ಭಾರತ
ಶ್ರೀಹರಿಕೋಟ , ಗುರುವಾರ, 12 ಆಗಸ್ಟ್ 2021 (09:31 IST)
ಶ್ರೀಹರಿಕೋಟ( ಆ. 12)  ಭಾರತವೂ ಬಾಹ್ಯಾಕಾಶ ಜಗತ್ತಿನಲ್ಲಿ ಮತ್ತೊಂದು ಸಾಧನೆ ಮಾಡಲು ಮುಂದಾಗಿದೆ.  ಭಾರತವು ತನ್ನ ಅತ್ಯಾಧುನಿಕ ಜಿಯೋ-ಇಮೇಜಿಂಗ್ ಉಪಗ್ರಹ ಜಿಎಸ್ ಎಲ್ ವಿ-ಎಫ್ 10/ಇಒಎಸ್-03ಯನ್ನು  ಆ. 12 ಗುರುವಾರ ಬೆಳಗ್ಗೆ 5.43 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಡಾಯಿಸಲಿದೆ.

ಹತ್ತು ವರ್ಷಕಾಲ ಕಕ್ಷೆಯಲ್ಲಿ ಉಪಗ್ರಹ ಸುತ್ತಲಿದೆ.  ರಿಯಲ್ ಟೈಮ್ ಇಮೇಜ್ ಗಳನ್ನು ಕಳಿಸಿಕೊಡುವ ಉದ್ದೇಶದಿಂದ ಉಡಾವಣೆ ಮಾಡಲಾಗುತ್ತಿದೆ.  ಇದಲ್ಲದೆ ಭೂಮಿಯ ಮೇಲೆ ನೈಸರ್ಗಿಕ ಅವಘಡಗಳು ಸಂಭವಿಸಬಹುದಾದ ಸಂದರ್ಭದಲ್ಲಿ ಮುನ್ನೆಚ್ಚರಿಕೆ..ನೀರಿನ ಮೂಲ, ಅರಣ್ಯ  ಈ  ರೀತಿ  ಹಲವು ಅಂಶಗಳನ್ನು ಹೊಸ ಉಪಗ್ರಹ ಮಾನಿಟರ್ ಮಾಡಲಿದೆ.
ಇಒಎಸ್-03 ಉಪಗ್ರಹವನ್ನು ಜಿಎಸ್ ಎಲ್ ವಿ-ಎಫ್-10ನ್ನು ಹೊತ್ತೊಯ್ಯಲಿದೆ ಎಂದು ಇಸ್ರೊ ತಿಳಿಸಿದೆ. 2 ಸಾವಿರದ 268 ಕೆಜಿ ತೂಕದ ಜಿಎಸ್ ಎಲ್ ವಿ-ಎಫ್ 10 ಇಒಎಸ್ -3, ಜಿಯೋ-ಉಪಗ್ರಹಗಳ ಹೊಸ ಸರಣಿಯ ಭಾಗವಾಗಿದೆ, ಇದು ನಾಗರಿಕ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಇಸ್ರೋದ ಜಿಎಸ್ಎಲ್ವಿ-ಎಫ್ 10 ರಾಕೆಟ್ ಮೂಲಕ ಕಕ್ಷೆಗೆ ಸೇರಿಸಲಿದೆ.
ಕಳೆದ ಫೆಬ್ರವರಿ 28 ರಂದು, ಇಸ್ರೋ 18 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಬ್ರೆಜಿಲ್ನ ಅಮೆಜೋನಿಯಾ -1 ಉಪಗ್ರಹ ಮತ್ತು ಕೆಲವು ದೇಸಿ ಉಪಗ್ರಹಗಳು ಇದ್ದವು. ಕೊರೋನಾ ನಂತರದ ಕಾಲದಲ್ಲಿ ಬಾಹ್ಯಾಕಾಶ ಚಟುವಟಿಕೆಗಳು ಬಂದ್ ಆಗಿದ್ದವು .
ವಾಸ್ತವದಲ್ಲಿ 2,268 ಕೆಜಿ ತೂಕದ ಜಿಸಾಟ್ -1 ಉಪಗ್ರಹವನ್ನು ಕಳೆದ ವರ್ಷ ಮಾರ್ಚ್ 5ರಂದೇ ಕಕ್ಷೆಗೆ ಕಳುಹಿಸಬೇಕಿತ್ತು. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಉಪಗ್ರಹ ಉಡಾವಣೆಯನ್ನು ಮುಂದಕ್ಕೆ ಹಾಕಲಾಗಿತ್ತು


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾವಿಗಳು ಸಹಾಯ ಮಾಡುತ್ತಾರೆ ಎಂಬ ಭ್ರಮೆಯಲ್ಲಿದ್ದೆ : ಆನಂದ ಸಿಂಗ್