Select Your Language

Notifications

webdunia
webdunia
webdunia
webdunia

ಪುಟ್ಟ ಕಂದನ ಜೀವ ಉಳಿಸುವ 16 ಕೋಟಿ ಮದ್ದಿಗೆ ತೆರಿಗೆ ರದ್ದು!

ಪುಟ್ಟ ಕಂದನ ಜೀವ ಉಳಿಸುವ 16 ಕೋಟಿ ಮದ್ದಿಗೆ ತೆರಿಗೆ ರದ್ದು!
ನವದೆಹಲಿ , ಗುರುವಾರ, 15 ಜುಲೈ 2021 (08:37 IST)
ನವದೆಹಲಿ(ಜು.15): ‘ಆನುವಂಶಿಕ ಸ್ನಾಯು ಕ್ಷೀಣತೆ’ ಎಂಬ ಕಾಯಿಲೆಯಿಂದ ಬಳಲುತ್ತಿರುವ ತಮಿಳುನಾಡಿನ 2 ವರ್ಷದ ಮಗುವಿನ ಗುಣಮುಖ ಪಡಿಸಲು ಅಗತ್ಯವಿರುವ ವಿಶ್ವದಲ್ಲೇ ಅತಿ ದುಬಾರಿ ಬೆಲೆಯ ಔಷಧದ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಜಿಎಸ್ಟಿಯನ್ನು ಮಾನವೀಯ ನೆಲೆಯಲ್ಲಿ ತೆರವುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.


* ತಮಿಳ್ನಾಡಿನ 2 ವರ್ಷದ ಮಗುವಿನ ರಕ್ಷಣೆಗಾಗಿ ಕೇಂದ್ರ ಈ ಕ್ರಮ
* ಅತಿ ದುಬಾರಿ ಇಂಜೆಕ್ಷನ್ನ ಜಿಎಸ್ಟಿ, ಆಮದು ಸುಂಕ ರದ್ದು
* 16 ಕೋಟಿ ರು. ಔಷಧದ ಬೆಲೆ 9 ಕೋಟಿಗೆ ಇಳಿಕೆ

ಈ ವ್ಯಾಧಿಯ ಚಿಕಿತ್ಸೆಗೆ ನೀಡಲಾಗುವ ಅಮೆರಿಕ ಮೂಲದ ಝೋಲ್ಂಗೆಸ್ಮಾ ಎಂಬ ಇಂಜೆಕ್ಷನ್ಗೆ ಸುಮಾರು 16 ಕೋಟಿ ರು. ತಗುಲುತ್ತದೆ. ಕೇಂದ್ರದ ಈ ನಿರ್ಧಾರದಿಂದಾಗಿ ಈ ಔಷಧದ ಒಟ್ಟಾರೆ ಬೆಲೆಯ ಪೈಕಿ ಶೇ.35ರಷ್ಟುದರ ಕಡಿಮೆಯಾಗಲಿದ್ದು, ಸುಮಾರು 9 ಕೋಟಿಗೆ ತಗ್ಗಲಿದೆ.
ಈವರೆಗೂ ಕುಟುಂಬದ ಬಳಿ ಅಷ್ಟುಹಣವಿಲ್ಲದ ಕಾರಣ, ಆನ್ಲೈನ್ ಕ್ರೌಡ್ ಫಂಡಿಂಗ್ ಮುಖಾಂತರ ಒಂದಿಷ್ಟುಹಣವನ್ನು ಸಂಗ್ರಹಿಸಲಾಗಿತ್ತು. ಜೊತೆಗೆ ತಮಗೆ ಆರ್ಥಿಕ ನೆರವು ನೀಡಬೇಕೆಂಬ ಕುಟುಂಬದ ಕೋರಿಕೆಯನ್ನು ಬಿಜೆಪಿ ಶಾಸಕಿ ಮತ್ತು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವನತಿ ಶ್ರೀನಿವಾಸನ್ ಅವರಿಂದ ತಿಳಿದ ಕೇಂದ್ರ ವಿತ್ತ ಸಚಿವಾಲಯ, ಅಮೆರಿಕದ ಝೋಲ್ಂಗೆಸ್ಮಾ ಇಂಜೆಕ್ಷನ್ ಮೇಲಿನ ಕಸ್ಟಮ್ಸ್ ಸುಂಕ ಮತ್ತು ಜಿಎಸ್ಟಿ ವಿನಾಯ್ತಿ ನೀಡುವುದಾಗಿ ಹೇಳಿದೆ.
ತನ್ಮೂಲಕ ಮಗುವಿನ ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿರುವ ಮಗುವಿನ ಕುಟುಂಬಕ್ಕೆ ಕೇಂದ್ರ ನೆರವಿನ ಹಸ್ತ ಚಾಚಿದಂತಾಗಿದೆ.
ಏನಿದು ಕಾಯಿಲೆ?
ಅನುವಂಶಿಕ ಸ್ನಾಯು ಕ್ಷೀಣತೆ ವ್ಯಾಧಿಯು ಅನುವಂಶೀಯವಾಗಿದ್ದು, ಇದು ಸ್ನಾಯು ಚಟುವಟಿಕೆಗಳನ್ನು ನಿಯಂತ್ರಿಸುವ ಮಿದುಳಿನ ಕಾಂಡ ಮತ್ತು ಬೆನ್ನು ಹುರಿಯಲ್ಲಿನ ನರ ಕೋಶಗಳನ್ನು ಕ್ರಮೇಣ ನಾಶಪಡಿಸುತ್ತದೆ. ಇದರಿಂದ ಈ ರೋಗಕ್ಕೆ ತುತ್ತಾದವರು ಮಾತನಾಡಲು, ನಡೆಯಲು, ಉಸಿರಾಡಲಾಗದ ಮತ್ತು ಸ್ನಾಯು ದೌರ್ಬಲ್ಯದಂಥ ರೋಗಗಳು ಕಾಣಿಸಿಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಈ ಸೋಂಕಿಗೆ ತುತ್ತಾಗಿರುವ ಮಗುವಿಗೆ ಹುಟ್ಟಿನಿಂದಲೂ ಇದೀಗ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವರಿಷ್ಠರ ಭೇಟಿಗೆ ನಾಳೆ ಸಿಎಂ ಬಿಎಸ್ವೈ ದಿಲ್ಲಿಗೆ!