Select Your Language

Notifications

webdunia
webdunia
webdunia
webdunia

ಜನಗಳೇ ಸ್ವಲ್ಪ ಯೋಚಿಸಿ?

ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ 80 ಪ್ರತಿಶತ ಪ್ರಕರಣಗಳು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 90 ಜಿಲ್ಲೆಗಳಿಂದ ವರದಿಯಾಗಿದ

ಜನಗಳೇ ಸ್ವಲ್ಪ ಯೋಚಿಸಿ?
ದೆಹಲಿ , ಶುಕ್ರವಾರ, 9 ಜುಲೈ 2021 (21:07 IST)
ದೆಹಲಿ:  ನಮ್ಮ ಜನಗಳ ಅಜಾಗರೂಕತೆಯ ಬಗ್ಗೆ ಒಂದು ಫೋಟೋ ತೋರಿಸಿದ ಸರ್ಕಾರ ’’ಜನಗಳೇ ಸ್ವಲ್ಪ ಯೋಚನೆ ಮಾಡಿ, ನೀವು ಏನು ಮಾಡ್ತಾ ಇದೀರಾ ಅಂತ ನಿಮಗೆ ಗೊತ್ತಿದೆಯೇ ’’ ಎಂದು ಜನರ ಅಜಾಗರೂಕತೆ ಬಗ್ಗೆ ಕಿಡಿಕಾರಿದೆ.


ಅರೆ ನಗ್ನವಾಗಿ ಜಲಪಾತದ ಬಳಿ ನೀರಿಗೆ ಮೈಯೊಡ್ಡಿ ನಿಂತಿರುವ ಜನ ಸಮೂಹದ ಫೋಟೋವನ್ನು ಶುಕ್ರವಾರ ನಡೆದ ಕೇಂದ್ರ ಆರೋಗ್ಯ ಸಚಿವಾಲಯದ ಸಭೆಯಲ್ಲಿ ಬ್ಯಾಕ್ ಡ್ರಾಪಿನಲ್ಲಿ ಪ್ರದರ್ಶಿಸಿ ಹೇಳಲಾಯಿತು. ಇದು ಸಾಮೂಹಿಕವಾಗಿ ನಾವೆಲ್ಲರೂ ಸೇರಿ ಕೊರೋನಾವನ್ನು ಮತ್ತೆ ಮೈಮೇಲೆ ಎಳೆದುಕೊಳ್ಳುವ ಪ್ರಕ್ರಿಯೆ ಎಂದು ಜರಾ ಸೋಚಿಯೆ (ಸ್ವಲ್ಪ ಯೋಚಿಸಿ) ಎಂದು  ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರು ಚಿತ್ರದ ಕಡೆಗೆ ಬೆರಳು ಮಾಡಿ ತೋರಿಸಿದರು.

ಮತ್ತೆ ಕೊರೋನಾ ಹೆಚ್ಚಾಗಲು ಕಾರಣರಾಗಬೇಡಿ, ಸ್ವಲ್ಪ ಯೋಚಿಸಿ, ಈ ರೀತಿಯ ಕೆಲಸಗಳು ಮತ್ತೆ ನಮ್ಮನ್ನು ಅಧೋಗತಿಗೆ ಕರೆದುಕೊಂಡು ಹೋಗುತ್ತದೆ ಎಂದರು.

ಮಸ್ಸೂರಿಯ ಕೆಂಪ್ಟಿ ಜಲಪಾತದ ಬಳಿಯ ಫೋಟೋ ಇದಾಗಿದ್ದು, ಈ ಫೋಟೋ ವೈರಲ್ ಆದ ನಂತರ ಪಅಲ್ಲಿನ ಪ್ರವಾಸೋಧ್ಯಮ ಅಧಿಕಾರಿಗಳು ಕೇವಲ 50 ಜನರಿಗೆ ಮಾತ್ರ ಅವಕಾಶ ಎನ್ನುವ ನಿಯಮ ತರಲು ಮುಂದಾಗಿದ್ದಾರೆ. ಪ್ರಸ್ತುತ ಈಗ ಅಲ್ಲಿ ಒಬ್ಬರಿಗೆ 30 ನಿಮಿಷಗಳ ಕಾಲ ಸ್ನಾನ ಮಾಡಲು ಮಾತ್ರ ಅವಕಾಶವಿದೆ. ಕೋವಿಡ್ ಮೂರನೇ ಅಲೆ ವ್ಯಾಪಕವಾಗಿ ಹರಡಲಿದೆ ಎನ್ನುವ ಎಚ್ಚರಿಕೆಯನ್ನು ಮೀರಿ ಬರುತ್ತಿರುವ ಪ್ರವಾಸಿಗರನ್ನು ಕಂಡು ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ವಾಹನ ದಟ್ಟಣೆ, ಕಿಕ್ಕಿರಿದ ಜನಸಂದಣಿಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ.
ನಾವುಗಳು ಈಗ ತಾನೇ ಎರಡನೇ ಅಲೆಯ ಅಟ್ಟಹಾಸದಿಂದ ಹೊರ ಬಂದಿದ್ದೇವೆ, ಮೂರನೇ ಅಲೆ ನಮಗಾಗಿ ಕಾಯುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಅಗರ್ವಾಲ್ ಎಚ್ಚರಿಕೆ ನೀಡಿದರು.
ಧರ್ಮಶಾಲಾದ ಪುಟ್ಟ ಹುಡುಗನೊಬ್ಬ ಜನಜಂಗುಳಿ ನಡುವೆ ಹೋಗುತ್ತಾ ಮಾಸ್ಕ್ ಧರಿಸಿದ ಎಲ್ಲರಿಗೂ ’’ಮಾಸ್ಕ್ ಧರಿಸಿ’’ ಎಂದು ಬೈಯುತ್ತಾ ಹೋಗುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು ತದ ನಂತರ ಟ್ವಿಟರ್ನಲ್ಲಿಯೂ ಈ ವಿಡಿಯೋ ವೈರಲ್ ಆಗಿತ್ತು.
ತಮ್ಮ ಮಾತಿನ ಮಧ್ಯೆ ಇತರೆ ದೇಶಗಳಾದ ಯುರೋಪ್, ರಷ್ಯಾ ದೇಶಗಳ ಉದಾಹರಣೆ ಕೊಡುತ್ತಾ, ನಮ್ಮ ದೇಶದಲ್ಲಿ ಈಗಲೂ ಜನಕ್ಕೆ ಸರಿಯಾದ ಅರಿವು ಮೂಡಿಲ್ಲ, ಇನ್ನಾದರೂ ಮಾಸ್ಕ್ ಬಳಕೆ ಹಾಗೂ ದೈಹಿಕ ಅಂತರ ಕಾಪಾಡಿಕೊಳ್ಳುವಂತೆ ಮನವಿ ಮಾಡಿದರು.ಕಳೆದ ವಾರ ಭಾರತದಲ್ಲಿ ವರದಿಯಾದ ಕೋವಿಡ್-19 ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರ (ಶೇ 21) ಮತ್ತು ಕೇರಳ (ಶೇ 32) ಎರಡು ರಾಜ್ಯಗಳಿಂದ ಬಂದವು ಎಂದು ಅವರು ಹೇಳಿದರು.
ಭಾರತದಲ್ಲಿ ಹೊಸ ಕೋವಿಡ್ ಪ್ರಕರಣಗಳಲ್ಲಿ 80 ಪ್ರತಿಶತ ಪ್ರಕರಣಗಳು 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 90 ಜಿಲ್ಲೆಗಳಿಂದ ವರದಿಯಾಗಿದೆ,  ಈ ಪ್ರದೇಶಗಳಲ್ಲಿಹೆಚ್ಚು ಗಮನ .ಹರಿಸಬೇಕು  ಜುಲೈ 8 ಕ್ಕೆ  17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 66 ಜಿಲ್ಲೆಗಳಲ್ಲಿ  ಶೇಕಡಾ 10 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು  ವರದಿಯಾಗಿದೆ ಎಂದರು.
ಭಾರತದಲ್ಲಿ ರೂಪಾಂತರಗೊಂಡ ಕೋವಿಡ್-19  ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಸರ್ಕಾರ ಹೇಳಿದೆ.  43,393 ಹೊಸಾ ಪ್ರಕರಣ ಹಾಗೂ ಇದುವರೆಗೂ ಸೋಂಕಿಗೆ ಒಳಗಾದವರ ಸಂಖ್ಯೆ 3,07,52,950ಕ್ಕೆ ಏರಿದೆ,   ಆದರೆ ಸಕ್ರಿಯ ಪ್ರಕರಣಗಳು 4,58,727 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

10ನೇ ತರಗತಿ ಪರೀಕ್ಷೆಯನ್ನು ಹಠಕ್ಕೆ ನಡೆಸುತ್ತಿಲ್ಲ; ಸಚಿವ ಸುರೇಶ್ ಕುಮಾರ್ ಹೇಳಿಕೆ