ಪ್ರಿಯಕರನಿಗೋಸ್ಕರ ಬಾಂಗ್ಲಾದಿಂದ ಭಾರತಕ್ಕೆ ಈಜಿಕೊಂಡೇ ಬಂದ್ಳು!

Webdunia
ಬುಧವಾರ, 1 ಜೂನ್ 2022 (10:48 IST)
ಕೋಲ್ಕತ್ತಾ : ನಾವು ಈ ಹಿಂದೆ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹುಡುಕಲು ಸಪ್ತ ಸಾಗರವನ್ನೇ ದಾಟಿ ಬರುವಂತಹ ಕಥೆಗಳನ್ನು ಕೇಳಿರುತ್ತೇವೆ. 
 
ಆದರೆ ಅವು ಕಾಲ್ಪನಿಕ ಕಥೆಗಳೇ ಹೊರತು ನಿಜವಲ್ಲ. ಆದರೆ ಇಲ್ಲೊಬ್ಬ ಬಾಂಗ್ಲಾದೇಶದ ಯುವತಿ ಭಾರತದಲ್ಲಿರುವ ತನ್ನ ಗೆಳೆಯನನ್ನು ಮದುವೆಯಾಗಲು ಈಜಿಕೊಂಡೇ ಬಂದಿದ್ದಾಳೆ. ತನ್ನ ಪ್ರಾಣವನ್ನೂ ಲೆಕ್ಕಿಸದೇ 1 ಗಂಟೆ ನದಿಯಲ್ಲಿ ಈಜುವ ಮೂಲಕ ಭಾರತ ಪ್ರವೆಶಿಸಿ ತನ್ನ ಪ್ರಿಯತಮನನ್ನು ಕೊನೆಗೂ ಭೇಟಿಯಾಗಿದ್ದಾಳೆ.
 
ಹೌದು, ಬಾಂಗ್ಲಾದೇಶದ ಯುವತಿ ಕೃಷ್ಣ ಮಂಡಲ್ ಭಾರತದ ಯುವಕ ಅಭಿಕ್ ಮಂಡಲ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ಭೇಟಿಯಾಗಿ, ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಕೃಷ್ಣ ಬಳಿ ಪಾಸ್ಪೋರ್ಟ್ ಇಲ್ಲದ ಕಾರಣ ಆಕೆ ತನ್ನ ಗೆಳೆಯನನ್ನು ಭೇಟಿಯಾಗಲು ಅಕ್ರಮವಾಗಿ ಭಾರತ ಪ್ರವೇಶಿಸಿಲು ನಿರ್ಧರಿಸಿದಳು.  
 
ಕೃಷ್ಣ ಮೊದಲು ರಾಯಲ್ ಬೆಂಗಾಲ್ ಟೈಗರ್ಸ್ಗೆ ಹೆಸರುವಾಸಿಯಾಗಿರುವ ಸುಂದರಬನ್ಸ್ ಪ್ರವೆಶಿಸಿದ್ದಳು. ಬಳಿಕ ತನ್ನ ಗೆಳೆಯನನ್ನು ತಲುಪಲು ನದಿಯಲ್ಲಿ ಸುಮಾರು 1 ಗಂಟೆ ಈಜಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ನಾಳೆ ಲಾಲ್‌ ಕ್ವಿಲಾ ಮೆಟ್ರೋ ನಿಲ್ದಾಣ ಬಂದ್‌

ದೆಹಲಿ ಕಾರು ಸ್ಫೋಟ: ಅಮಿತ್ ಶಾ ರಾಜೀನಾಮೆಗೆ ಹೆಚ್ಚಿದ ಒತ್ತಾಯ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಲಾಲೋಕ ಮಳಿಗೆ, ಏನೆಲ್ಲಾ ಸಿಗಲಿದೆ ಗೊತ್ತಾ

ಕಾರು ಸ್ಫೋಟದ ಹಿಂದಿನ ಪ್ರತಿಯೊಬ್ಬ ಅಪರಾಧಿಯನ್ನು ಭೇಟೆಯಾಡಿ: ಅಮಿತ್ ಶಾ

ದೆಹಲಿಯಲ್ಲಿ ಕಾರು ಸ್ಫೋಟ: ರಾಜ್ಯದ ಈ ಜಿಲ್ಲೆಯಲ್ಲಿ ಹೆಚ್ಚಿನ ಭದ್ರತೆ

ಮುಂದಿನ ಸುದ್ದಿ
Show comments