Publish Date: Tue, 29 May 2018 (11:17 IST)
Updated Date: Tue, 29 May 2018 (13:52 IST)
ನವದೆಹಲಿ: ಪ್ರಧಾನಿ ಮೋದಿ ನೇಪಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಗ್ಗೆ ತಪ್ಪಾಗಿ ಟ್ವೀಟ್ ಮಾಡಿದ್ದಕ್ಕೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕ್ಷಮೆ ಯಾಚಿಸಿದ್ದಾರೆ.
ನೇಪಾಳದ ಜಣಕಪುರದಲ್ಲಿ ಪ್ರಧಾನಿ ಮೋದಿ ಲಕ್ಷಾಂತರ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು ಎಂದು ಸಚಿವೆ ಸುಷ್ಮಾ ಟ್ವೀಟ್ ಮಾಡಿದ್ದರು. ಅಸಲಿಗೆ ಅಲ್ಲಿ ನೇಪಾಳಿಯರು ಎನ್ನುವ ಬದಲು ಸುಷ್ಮಾ ಭಾರತೀಯರು ಎಂದಿದ್ದರು.
ಈ ತಪ್ಪನ್ನು ಹಲವರು ಸುಷ್ಮಾಗೆ ಎತ್ತಿ ತೋರಿಸಿದ್ದರು. ಅದರಲ್ಲಿ ನೇಪಾಳದ ಸಂಸದರೂ ಒಬ್ಬರಿದ್ದರು. ಇದಾದ ಬಳಿಕ ಎಚ್ಚೆತ್ತುಕೊಂಡ ಸುಷ್ಮಾ ‘ಇದು ನನ್ನಿಂದ ನಡೆದ ದೊಡ್ಡ ಪ್ರಮಾದ. ಅದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಮತ್ತೊಂದು ಟ್ವೀಟ್ ಮಾಡಿ ತಪ್ಪು ತಿದ್ದಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.