Select Your Language

Notifications

webdunia
webdunia
webdunia
webdunia

ಪಟಾಕಿ ಮಾರಾಟದ ಕುರಿತು ಸುಪ್ರೀಕೋರ್ಟ್ ಮಹತ್ವದ ಮಾಹಿತಿ!

ಪಟಾಕಿ ಮಾರಾಟದ ಕುರಿತು ಸುಪ್ರೀಕೋರ್ಟ್ ಮಹತ್ವದ ಮಾಹಿತಿ!
ನವದೆಹಲಿ , ಮಂಗಳವಾರ, 2 ನವೆಂಬರ್ 2021 (13:23 IST)
ದೀಪಾವಳಿ ಹಬ್ಬದ ಋತುವಿನಲ್ಲಿ ಹಸಿರು ಪಟಾಕಿಗಳು ಹಾಗೂ ಕಡಿಮೆ ಮಾಲಿನ್ಯಕಾರಕ ವಸ್ತುಗಳನ್ನು ಬಳಸಿ ತಯಾರಿಸಿದ ಪಟಾಕಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಳಸಬಹುದು ಅಂತ ಸುಪ್ರೀಂ ಕೋರ್ಟ್ ಹೇಳಿದೆ.
ಶುದ್ಧ, ಆರೋಗ್ಯಕರ ಮತ್ತು ಉಸಿರಾಡುವ ಗಾಳಿಯ ಜನರ ಹಕ್ಕನ್ನು ರಕ್ಷಿಸಲು ಮುಂಬರುವ ಹಬ್ಬಗಳಲ್ಲಿ ಪಟಾಕಿ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವಂತೆ ಕೋರಿ ಪರಿಸರ ಕಾರ್ಯಕರ್ತೆ ರೋಶನಿ ಅಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿ ಕೊಲ್ಕತ್ತಾ ಹೈಕೋರ್ಟ್ ಆದೇಶವನ್ನು ಹೊರಡಿಸಿತ್ತು. ಆದ್ರೆ ನ್ಯಾಯಮೂರ್ತಿಗಳಾದ ಎ.ಎಂ ಖಾನ್ವಿಲ್ಕರ್ ಮತ್ತು ಅಜಯ್ ರಸ್ತೋಗಿ ವಿಶೇಷ ಪೀಠವು ಪಟಾಕಿಗಳ ಬಳಕೆ ಮಾಡಬಹುದು ಅಂತ ಆದೇಶ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಭಾಷಣದ ವೇಳೆ ಬಾಂಬ್ ಸ್ಪೋಟ!