Select Your Language

Notifications

webdunia
webdunia
webdunia
webdunia

ಉದ್ಘಾಟನೆಗೆ ಮುನ್ನವೇ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

ಉದ್ಘಾಟನೆಗೆ ಮುನ್ನವೇ  ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ
ಹುಬ್ಬಳಿ , ಸೋಮವಾರ, 13 ಮಾರ್ಚ್ 2023 (09:56 IST)
ಹುಬ್ಬಳಿ : ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ ಬರೆದಿದ್ದು, ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ಫಾರಂ ಭಾನುವಾರ ದೇಶಕ್ಕೆ ಸಮರ್ಪಣೆಯಾಗಲಿದೆ.
 
ಧಾರವಾಡದಲ್ಲಿ ನಡೆಯುವ ಐಐಟಿ ಉದ್ಘಾಟನೆ ವೇದಿಕೆ ಕಾರ್ಯಕ್ರಮದಲ್ಲಿ ರಿಮೋಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಪ್ಲಾಟ್ಫಾರಂಗೆ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆಗೊಂಡಿರುವ ಅತಿ ಉದ್ದದ ಪ್ಲಾಟ್ಫಾರಂ ಇದಾಗಿದ್ದು, 1,507 ಮೀಟರ್ ಉದ್ದವನ್ನೊಳಗೊಂಡಿದೆ.

ಇದೀಗ ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ಫಾರಂ ಹೊಂದಿದ ಹೆಗ್ಗಳಿಕೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿ ಪಡೆಯುತ್ತಿದೆ. ನೈರುತ್ವ ರೈಲ್ವೆ ವಲಯದಿಂದ ಈ ಅತಿ ದೊಡ್ಡ ಪ್ಲಾಟ್ಫಾರಂ ಸ್ಥಾಪನೆ ಮಾಡಲಾಗಿದೆ. ಇದರ ಜೊತೆಗೆ 2 ಎಲೆಕ್ಟ್ರಿಕಲ್ ಇಂಜಿನ್ ಟ್ರೈನ್, ಮೇಲ್ದರ್ಜೆಗೇರಿದ ಹಳಿ ಸೇರಿದಂತೆ 552 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಹಿತಾಸಕ್ತಿಗಾಗಿ ಪರಿಚಯಿಸಲಾಗಿದೆ : ಹೈಕೋರ್ಟ್