Select Your Language

Notifications

webdunia
webdunia
webdunia
webdunia

ಕುಡಿದು ಬಸ್ನಲ್ಲಿ ಯುವತಿಯ ಸೀಟ್ ಮೇಲೆ ಮೂತ್ರವಿಸರ್ಜನೆ !

ಕುಡಿದು ಬಸ್ನಲ್ಲಿ ಯುವತಿಯ ಸೀಟ್ ಮೇಲೆ ಮೂತ್ರವಿಸರ್ಜನೆ !
ಹುಬ್ಬಳ್ಳಿ , ಗುರುವಾರ, 23 ಫೆಬ್ರವರಿ 2023 (10:51 IST)
ಹುಬ್ಬಳ್ಳಿ : ಕಂಠಪೂರ್ತಿ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಕೆಎಸ್ಆರ್ಟಿಸಿ ಬಸ್ನಲ್ಲಿ ಯುವತಿಯೊಬ್ಬಳ ಸೀಟ್ ಮೇಲೆ ಮೂತ್ರವಿಸರ್ಜನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ವಿಜಯಪುರದಿಂದ ಮಂಗಳೂರಿನ ಕಡೆ ಹೊರಟಿದ್ದ ಬಸ್ನಲ್ಲಿ 32 ವರ್ಷದ ಕುಡುಕ ಪ್ರಯಾಣಿಕನೊಬ್ಬ ಅನಾಗರಿಕ ಪ್ರದರ್ಶನ ತೋರಿದ್ದಾನೆ. ಕೆಎಸ್ಆರ್ಟಿಸಿಯ ಹವಾನಿಯಂತ್ರಿತವಲ್ಲದ ಸ್ಲೀಪರ್ ಬಸ್ ಅನ್ನು ಪ್ರಯಾಣದ ವೇಳೆ ನಡುವೆ ಹುಬ್ಬಳ್ಳಿ ಬಳಿಯ ಕಿರೆಸೂರು ಡಾಬಾ ಬಳಿ ಊಟಕ್ಕೆಂದು ನಿಲ್ಲಿಸಲಾಗಿತ್ತು.

ಎಲ್ಲಾ ಪ್ರಯಾಣಿಕರು ಬಸ್ನಿಂದ ಇಳಿದು ಊಟಕ್ಕೆ ಹೋಗಿದ್ದರು. ಆದರೆ ಅದೇ ಬಸ್ನಲ್ಲಿದ್ದ ಕುಡುಕ ಪ್ರಯಾಣಿಕ ಬಸ್ನಿಂದ ಇಳಿಯಲಾರದೇ 3ನೇ ಸೀಟ್ ಮೇಲೆ ಕುಳಿತು ಮೂತ್ರ ವಿಸರ್ಜನೆ ಮಾಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾಕ್ಕೆ ಹೆದರಿ ಮನೆಯೊಳಗೆ ಅಪ್ರಾಪ್ತ ಮಗನೊಂದಿಗೆ ಬಂಧಿಯಾದ ತಾಯಿ!