Publish Date: Fri, 20 Jul 2018 (09:05 IST)
Updated Date: Fri, 20 Jul 2018 (09:07 IST)
ನವದೆಹಲಿ: ಇಂದು ನಡೆಯಲಿರುವ ಅವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಮೋದಿ ಸರ್ಕಾರದ ವಿರುದ್ಧ ವೋಟ್ ಮಾಡಲು ನಮ್ಮಲ್ಲಿ ಸಂಖ್ಯಾ ಬಲದ ಕೊರತೆಯಿಲ್ಲ ಎಂದಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಕೇಂದ್ರ ಸಚಿವ ಅನಂತ ಕುಮಾರ್ ತಿರುಗೇಟು ನೀಡಿದ್ದಾರೆ.
ನಮ್ಮಲ್ಲಿ ಸಂಖ್ಯಾ ಬಲದ ಕೊರತೆಯಿದೆ ಎಂದು ಹೇಳಿದವರಾರು? ಎಂದು ಅವಿಶ್ವಾಸಮತ ಪ್ರಕ್ರಿಯೆ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಸೋನಿಯಾ ಗಾಂಧಿ ಉತ್ತರಿಸಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ ಕುಮಾರ್ ‘ಸೋನಿಯಾ ಜೀ ಲೆಕ್ಕದಲ್ಲಿ ತುಂಬಾ ವೀಕ್. ಅವರ ಲೆಕ್ಕಾಚಾರವೇ ತಪ್ಪು. ಮೋದಿ ಸರ್ಕಾರಕ್ಕೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಹುಮತಕ್ಕೆ ಬೇಕಾದಷ್ಟು ಸಂಖ್ಯಾ ಬಲವಿದೆ’ ಎಂದು ಅವರು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.