Select Your Language

Notifications

webdunia
webdunia
webdunia
webdunia

ಪ್ರಥಮ ಬಾರಿಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಕೆ!

ಪ್ರಥಮ ಬಾರಿಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಕೆ!
ಬೆಂಗಳೂರು , ಬುಧವಾರ, 17 ನವೆಂಬರ್ 2021 (13:00 IST)
ಬೆಂಗಳೂರು : ರಾಜ್ಯದಲ್ಲಿ ಪ್ರಥಮಬಾರಿಗೆ ಸರ್ಕಾರಿ ಕಟ್ಟಡದ ಮೇಲೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಲಾಗಿದೆ.
ರಾಜಾಜಿನಗರ ಬಿಬಿಎಂಪಿ ಕಟ್ಟಡದ ಮೇಲೆ ಸೋಲಾರ್ ವಿದ್ಯುತ್ ಘಟಕ ಅಳವಡಿಸಲಾಗಿದೆ. ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ಅನುದಾನದಡಿ ಈ ವಿನೂತನ ಪ್ರಯತ್ನ ಕೈಗೊಳ್ಳಲಾಗಿದೆ. ಸುಮಾರು 40 ಲಕ್ಷ ರೂಗಳ ವೆಚ್ಚದಲ್ಲಿ ಈ ಸೋಲಾರ್ ವಿದ್ಯುತ್ ಘಟಕ ಎಂಎಸ್ಐಎಲ್ ಸಂಸ್ಥೆಯಿಂದ ಅಳವಡಿಸಲಾಗಿದೆ. ಸಧ್ಯಕ್ಕೆ 40 ಕಿಲೋ ವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುವ ಸಾಮರ್ಥ್ಯವುಳ್ಳ ಸೌರಶಕ್ತಿಯ ಉಪಕರಣಗಳನ್ನು ಇಲ್ಲಿ ಅಳವಡಿಸಲಾಗಿದೆ.
ದಿನಕ್ಕೆ ಸುಮಾರು 160 ರಿಂದ 200 ಯೂನಿಟ್ ಗಳವರೆಗೆ ವಿದ್ಯುತ್ ಉತ್ಪಾದನೆಯಾಗಲಿದೆ. ಮೊದಲ ಹಂತದಲ್ಲಿ ಬಿಬಿಎಂಪಿ ಇಂಜಿನಿಯರಿಂಗ್, ಆರೋಗ್ಯ ಹಾಗೂ ರೆವಿನ್ಯೂ ಕಚೇರಿಗಳಿಗೆ ವಿದ್ಯುತ್ತನ್ನು ಒದಗಿಸಲಾಗುವುದು. ರಜೆ ದಿನಗಳು, ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರಗಳಂದು ಉಳಿತಾಯವಾಗುವ ವಿದ್ಯುತ್ತನ್ನು ಬೆಸ್ಕಾಂ ಗ್ರಿಡ್ ಗೆ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಇದರಿಂದ ಪ್ರತಿ ತಿಂಗಳು ಸುಮಾರು 48 ಸಾವಿರ ರೂಗಳು ಉಳಿತಾಯವಾಗಲಿದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು 25 ವರ್ಷಗಳ ಕಾಲ ಖರೀದಿಸಲು ಬೆಸ್ಕಾಂ ಜೊತೆ ಎಂಎಸ್ಐಎಲ್ ಸಂಸ್ಥೆ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗೆ ಎಲ್ಲ ಸರ್ಕಾರಿ ಕಚೇರಿ, ಸರ್ಕಾರಿ ಕಟ್ಟಡಗಳಿಗೆ ಅನುಕರಣೀಯವೆನಿಸುವ ಹೆಜ್ಜೆ ಇಟ್ಟಿರುವುದು ಮಾಜಿ ಸಚಿವ ಎಸ್ ಸುರೇಶ್ ಕುಮಾರ್.


Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮೀಯ ಶೈಲಿಯಲ್ಲಿ ಮನೆಗೆ ಕನ್ನ! ಮುಂದೇನಾಯ್ತು?