Select Your Language

Notifications

webdunia
webdunia
webdunia
webdunia

ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿ ಯುವತಿಗೆ ಗಂಭೀರ ಗಾಯ !

ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿ ಯುವತಿಗೆ ಗಂಭೀರ ಗಾಯ !
ಚಂಡೀಗಢ , ಭಾನುವಾರ, 26 ಜೂನ್ 2022 (10:09 IST)
ಚಂಡೀಗಢ : 19 ವರ್ಷದ ಯುವತಿ ಮೇಲೆ ಆಕೆಯ ಪ್ರಿಯಕರನೇ ಗುಂಡು ಹಾರಿಸಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಐಎಂಟಿ ಮನೇಸರ್ ಪ್ರದೇಶದಲ್ಲಿ ನಡೆದಿದೆ.
 
ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಪೊಲೀಸರ ಪ್ರಕಾರ, ಮಹಿಳೆ ಕೆಲಸಕ್ಕೆ ಹೋಗುತ್ತಿದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಆರೋಪಿಯನ್ನು ಅಭಯ್ ಶರ್ಮಾ ಎಂದು ಗುರುತಿಸಲಾಗಿದ್ದು, ಈತ ತನ್ನ ಶಾಲಾ ದಿನಗಳಿಂದಲೂ ಯುವತಿಯನ್ನು ಇಷ್ಟಪಡುತ್ತಿದ್ದ ಎನ್ನಲಾಗಿದೆ.

ಶನಿವಾರ ಬೈಕ್ನಲ್ಲಿ ಬಂದು ಯುವತಿಯನ್ನು ಅಡ್ಡಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವತಿ ಮಾತನಾಡಲು ನಿರಾಕರಿಸಿದ್ದರಿಂದ ಬಂದೂಕನ್ನು ಹೊರತೆಗೆದು ಗುಂಡು ಹಾರಿಸಿದ್ದಾನೆ. ಘಟನೆ ವೇಳೆ ಯುವತಿ ಕುತ್ತಿಗೆಗೆ ಗುಂಡು ತಗುಲಿ ಕೆಳಗೆ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೋರ್ವ ಆರೋಪಿ ಬಂದಿದ್ದ ಬೈಕ್ ಅನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಸೇವೆ ಸ್ಥಗಿತ- ಇಂದು ರಾತ್ರಿ 9:30 ರಿಂದ ಬೆಳಗ್ಗೆ 7 ಗಂಟೆ ವರೆಗೂ.