Publish Date: Thu, 12 Jan 2023 (17:50 IST)
Updated Date: Thu, 12 Jan 2023 (17:53 IST)
ಹುಬ್ಬಳ್ಳಿ : ರಾಷ್ಟ್ರೀಯ ಯುವ ಜನೋತ್ಸವಕ್ಕೆ ಚಾಲನೆ ನೀಡಲು ಗುರುವಾರ ಸಂಜೆ ಹುಬ್ಬಳ್ಳಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುತ್ತಿರುವಾಗ ಭದ್ರತಾ ಲೋಪವಾಗಿದೆ.
ಹುಬ್ಬಳ್ಳಿಯಲ್ಲಿ ಯುವಜನೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಕನೊಬ್ಬ ನೇರವಾಗಿ ಹಾರ ಹಾಕಲು ಮುಂದಾಗಿದ್ದಾರೆ. ಕಾರ್ಯಕ್ರಮದ ಸುತ್ತಲು ಪ್ರಧಾನಿಯವರಿಗೆ ಬಿಗಿ ಭದ್ರತೆ ಇದ್ದರೂ ಸಹ ಬಾಲಕ ಅವರ ಕಣ್ತಪ್ಪಿಸಿ ಅವರ ಸಮೀಪಕ್ಕೆ ತಲುಪಿರುವುದು ಭದ್ರತೆ ಲೋಪವನ್ನು ಪ್ರದರ್ಶಿಸುತ್ತದೆ.
ಈ ವೇಳೆ ಪ್ರಧಾನಿ ಮೋದಿ ಬಾಲಕನಿಂದ ಹೂವಿನ ಹಾರ ಪಡೆದು ಕಾರಿನ ಮೇಲೆ ಹಾಕಿದ್ದಾರೆ. ಬಳಿಕ ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದಿದ್ದಾರೆ.