Publish Date: Thu, 12 Jan 2023 (17:31 IST)
Updated Date: Thu, 12 Jan 2023 (17:37 IST)
ಹುಬ್ಬಳ್ಳಿ : ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು ಜನರು ಇಕ್ಕೆಲಗಳಲ್ಲಿ ನಿಂತು ಭವ್ಯ ಸ್ವಾಗತ ಕೋರಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ರೈಲ್ವೇ ಮೈದಾನಕ್ಕೆ 8 ಕಿ.ಮೀ ರೋಡ್ ಶೋ ನಡೆಸಿ ಆಗಮಿಸಿದರು. ಮೋದಿ ಕಾರು ಬರುತ್ತಿದ್ದಂತೆ ಬಿಸಿನನ್ನು ಲೆಕ್ಕಿಸದೇ ನಿಂತಿದ್ದ ಅಭಿಮಾನಿಗಳು ಹೂ ಮಳೆ ಸುರಿಸಿ “ಜೈ ಮೋದಿ, ಮೋದಿ ಮೋದಿ” ಎಂದು ಘೋಷಣೆ ಕೂಗಿದರು.
ಮೋದಿ ಅಭಿಮಾನಿಗಳು ಮೋದಿ ಭಾವಚಿತ್ರವನ್ನು ಕೈಯಲ್ಲಿ ಹಿಡಿದಿದ್ದರೆ ಇನ್ನು ಕೆಲವರು ಸ್ವಾಮಿ ವಿವೇಕಾನಂದ, ರಾಮ, ಸೀತೆಯ ಭಾವ ಚಿತ್ರವನ್ನು ಹಿಡಿದು ನಿಂತಿದ್ದರು.