Select Your Language

Notifications

webdunia
webdunia
webdunia
webdunia

ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್

ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ SEC ಗ್ರೀನ್ ಸಿಗ್ನಲ್
ನವದೆಹಲಿ , ಮಂಗಳವಾರ, 12 ಅಕ್ಟೋಬರ್ 2021 (19:30 IST)
ಶಾಲೆಗಳತ್ತ ಮಕ್ಕಳು ಮುಖ ಮಾಡಿರುವ ಈ ಸಮಯದಲ್ಲಿ ಮಕ್ಕಳ ಕೊರೊನಾ ಲಸಿಕೆ ಸಂಬಂಧ ಮಹತ್ವದ ಸುದ್ದಿ ಹೊರ ಬಿದ್ದಿದೆ. ZyCoV-D ಬಳಿಕ ಮತ್ತೊಂದು ಮಕ್ಕಳ ಲಸಿಕೆಗೆ ಅನುಮತಿ ಸಿಕ್ಕಿದೆ.
Photo Courtesy: Google

ಔಷಧ ನಿಯಂತ್ರಕದ ವಿಷಯ ತಜ್ಞರ ಸಮಿತಿಯು (SEC) 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೊವಾಕ್ಸಿನ್ ಲಸಿಕೆಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವಂತೆ ಶಿಫಾರಸು ಮಾಡಿದೆ. ಅಂತಿಮ ಅನುಮೋದನೆಗಾಗಿ ಎಸ್ ಇಸಿ ತನ್ನ ಶಿಫಾರಸನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗೆ ಸಲ್ಲಿಸಿದೆ. ವಿವರವಾದ ಚರ್ಚೆಯ ನಂತರ, ತುರ್ತು ಪರಿಸ್ಥಿತಿಯಲ್ಲಿ ಬಳಕೆಗಾಗಿ ಲಸಿಕೆಯ ಮಾರುಕಟ್ಟೆ ಅನುಮೋದನೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ ಎಂದು ತಜ್ಞರ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ತುರ್ತು ಬಳಕೆಯ ಅಧಿಕಾರವು ನಾಲ್ಕು ಷರತ್ತುಗಳನ್ನು ಒಳಗೊಂಡಿದೆ.
ತಜ್ಞರ ಸಮಿತಿಯ ಷರತ್ತುಗಳು  ಹೀಗಿವೆ
*ಸಂಸ್ಥೆಯು ಅಪ್ಡೇಟ್ ಮಾಡಿದ ಪ್ರಿಸ್ಕ್ರೈಬಿಂಗ್ ಮಾಹಿತಿ/ಪ್ಯಾಕೇಜ್ ಇನ್ಸರ್ಟ್ (PI), ಉತ್ಪನ್ನ ಗುಣಲಕ್ಷಣಗಳ ಸಾರಾಂಶ (SmPC) ಮತ್ತು ಫ್ಯಾಕ್ಶೀಟ್ ಅನ್ನು ಒದಗಿಸಬೇಕು;
*ಸಂಸ್ಥೆಯು AEFI ಮತ್ತು AESI ದತ್ತಾಂಶವನ್ನು ಒಳಗೊಂಡಂತೆ ಸುರಕ್ಷತಾ ಡೇಟಾವನ್ನು ಸಲ್ಲಿಸಬೇಕು
*ಸರಿಯಾದ ವಿಶ್ಲೇಷಣೆಯೊಂದಿಗೆ, ಮೊದಲ 15 ತಿಂಗಳಿಗೊಮ್ಮೆ ಪ್ರತಿ 15 ದಿನಗಳಿಗೊಮ್ಮೆ ಮತ್ತು ನಂತರ ಮಾಸಿಕ ವರದಿ ನೀಡಬೇಕು.
*ಹೊಸ ಔಷಧಗಳು ಮತ್ತು ಚಿಕಿತ್ಸಾ ಪ್ರಯೋಗಗಳ ನಿಯಮಗಳಾದ 2019 ರ ಅಗತ್ಯತೆಗಳ ಪ್ರಕಾರ ಸಂಸ್ಥೆಯು ಅಪಾಯ ನಿರ್ವಹಣಾ ಯೋಜನೆಯನ್ನು ಸಲ್ಲಿಸಬೇಕು.
28 ದಿನಗಳ ಅಂತರದಲ್ಲಿ ಮಕ್ಕಳಿಗೆ 2 ಡೋಸ್
ಭಾರತ್ ಬಯೋಟೆಕ್ ಕಳೆದ ವಾರ ಮಕ್ಕಳ ಮೇಲಿನ ಕ್ಲಿನಿಕಲ್ ಪ್ರಯೋಗಗಳ ಡೇಟಾವನ್ನು ಡಿಸಿಜಿಐಗೆ ಪರಿಶೀಲನೆಗಾಗಿ ಮತ್ತು ತುರ್ತು ಬಳಕೆಯ ಅನುಮೋದನೆಗಾಗಿ ಸಲ್ಲಿಸಿತ್ತು.  ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ 2-18 ವಯೋಮಾನದವರಿಗೆ ಕೋವಿಡ್ -19 ಲಸಿಕೆಗಳಿಗಾಗಿ ವಿಶ್ವದ ಮೊದಲ ಅನುಮೋದನೆ ಪಡೆದ ಲಸಿಕೆಯಾಗಿದೆ.  28 ದಿನಗಳ ಅಂತರದಲ್ಲಿ ಮಕ್ಕಳಿಗೆ ಎರಡು ಡೋಸ್ ಕೋವಾಕ್ಸಿನ್ ನೀಡಲಾಗುವುದು. ವಯಸ್ಕರಿಗೆ, ಸರ್ಕಾರವು ಎರಡು ಡೋಸ್ಗಳ ನಡುವೆ 4-6 ವಾರಗಳ ಅಂತರವನ್ನು ನಿಗದಿಪಡಿಸಿದೆ.
ಅನುಮತಿ ಪಡೆದ 2ನೇ ಲಸಿಕೆ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೊವಾಕ್ಸಿನ್ ಅನ್ನು ಭಾರತದಲ್ಲಿ ನಡೆಯುತ್ತಿರುವ ಕೋವಿಡ್ -19 ಲಸಿಕೆ ಅಭಿಯಾನದಲ್ಲಿ ವಯಸ್ಕರಿಗೆ ಬಳಸಲಾಗುತ್ತಿದೆ.  ಇದು ಭಾರತದಲ್ಲಿ ಮಕ್ಕಳಿಗೆ ಅನುಮೋದನೆ ಪಡೆದ ಎರಡನೇ COVID-19 ಲಸಿಕೆಯಾಗಿದೆ. DGCI, ಆಗಸ್ಟ್ನಲ್ಲಿ, ZyCoV-D ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ವಯಸ್ಕರಿಗೆ ಅನುಮೋದಿಸಿತ್ತು. ಆದರೆ ಮಕ್ಕಳಿಗೆ ಲಸಿಕಾ ವಿತರಣೆ ಇನ್ನೂ ಆರಂಭವಾಗಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಕುಮಾರಸ್ವಾಮಿ ಹತಾಶರಾಗಿ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ; ವಿಎಸ್ ಉಗ್ರಪ್ಪ ಆಕ್ರೋಶ