Select Your Language

Notifications

webdunia
webdunia
webdunia
webdunia

ವಿಶ್ವಸಂಸ್ಥೆ ಯಿಂದ ರಷ್ಯಾ ಸಸ್ಪೆಂಡ್!?

ವಿಶ್ವಸಂಸ್ಥೆ ಯಿಂದ ರಷ್ಯಾ ಸಸ್ಪೆಂಡ್!?
ನ್ಯೂಯಾರ್ಕ್ , ಶುಕ್ರವಾರ, 8 ಏಪ್ರಿಲ್ 2022 (07:06 IST)
ನ್ಯೂಯಾರ್ಕ್ : ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾವನ್ನು ವಿಶ್ವ ಮಾನವ ಹಕ್ಕುಗಳ ಮಂಡಳಿಯಿಂದ ಅಮಾನತುಗೊಳಿಸಲಾಗಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತುಗೊಳಿಸುವ ನಿರ್ಣಯಕ್ಕೆ ಮತ ಹಾಕಲಾಯಿತು.

ಈ ವೇಳೆ ರಷ್ಯಾ ವಿರುದ್ಧ 93 ದೇಶಗಳು ಮತ ಚಲಾಯಿಸಿವೆ. ರಷ್ಯಾ ಪರವಾಗಿ 24 ದೇಶಗಳು ಮತ ಹಾಕಿವೆ. ಆದರೆ ಭಾರತ ಸೇರಿದಂತೆ 54 ದೇಶಗಳು ಮತದಾನದಿಂದ ದೂರ ಉಳಿದವು.

ಉಕ್ರೇನ್ನ ಬುಚಾದಲ್ಲಿ ನಾಗರಿಕರನ್ನು ರಷ್ಯಾ ಸೈನಿಕರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಉಕ್ರೇನ್ ಆರೋಪವನ್ನು ರಷ್ಯಾ ನಿರಾಕರಿಸಿತ್ತು. 

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ದೇಶವೊಂದನ್ನು ಅಮಾನತು ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2011 ರಲ್ಲಿ ಲಿಬಿಯಾವನ್ನು ಮೊದಲ ಬಾರಿಗೆ ಅಮಾನತು ಮಾಡಲಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ