Select Your Language

Notifications

webdunia
webdunia
webdunia
webdunia

ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ, ಉಕ್ರೇನ್ಗೆ ನೆರವಾಗುತ್ತೇವೆ : ಅಮೆರಿಕ

ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ, ಉಕ್ರೇನ್ಗೆ ನೆರವಾಗುತ್ತೇವೆ : ಅಮೆರಿಕ
ವಾಷಿಂಗ್ಟನ್ , ಭಾನುವಾರ, 3 ಏಪ್ರಿಲ್ 2022 (07:21 IST)
ವಾಷಿಂಗ್ಟನ್ : ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದರೆ, ಅಮೆರಿಕ ಉಕ್ರೇನ್ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜುಗಳನ್ನು ಒದಗಿಸುತ್ತದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ತಿಳಿಸಿದರು.
 
ಅಮೆರಿಕ ಹಾಗೂ ಅಂತರರಾಷ್ಟ್ರೀಯ ಸಮುದಾಯ ಸದಸ್ಯರು ರಷ್ಯಾ, ಉಕ್ರೇನ್ ಮೇಲೆ ರಾಸಾಯನಿಕ ಅಥವಾ ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಬಗ್ಗೆ ಆಗಾಗ ಎಚ್ಚರಿಸುತ್ತಲೇ ಇದ್ದಾರೆ.

ಆದರೆ ಇದು ರಷ್ಯಾದ ಬೆದರಿಕೆಯಷ್ಟೇ ಆಗಿರಬಹುದು ಎಂದು ಜೆನ್ ಪಾಕ್ಸಿ ಹೇಳಿದರು.  ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸಿದ್ದಲ್ಲಿ, ಉಕ್ರೇನ್ಗೆ ಜೀವರಕ್ಷಕ ಉಪಕರಣ ಹಾಗೂ ಸರಬರಾಜನ್ನು ನೀಡುತ್ತೇವೆ.

ಆದರೆ ಉಕ್ರೇನ್ಗೆ ನೆರವು ನೀಡಲು ಅಮೆರಿಕ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ರೂಪಾಂತರಿ ಪತ್ತೆ! : ಮತ್ತೆ ಶಾಕ್ ಕೊಟ್ಟ ಕೋವಿಡ್