Publish Date: Tue, 27 Jun 2023 (07:51 IST)
Updated Date: Tue, 27 Jun 2023 (10:54 IST)
ಬೆಂಗಳೂರು : ಪಿಎಸ್ಐ ನೇಮಕಾತಿ ಹಗರಣ ಪ್ರಕರಣದಿಂದ ರದ್ದಾಗಿರುವ ಅಭ್ಯರ್ಥಿಗಳಿಗೆ ಮರುಪರೀಕ್ಷೆ ವಿಚಾರದ ಬಗ್ಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ.
ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಮರುಪರೀಕ್ಷೆಯ ಬಗ್ಗೆ ಸರ್ಕಾರ ತನ್ನ ನಿರ್ಧಾರ ತಿಳಿಸಲಿದೆ. ಈ ಹಿಂದೆ 510 ಅಭ್ಯರ್ಥಿಗಳಿಗೆ ಕಿರುಪರೀಕ್ಷೆಯ ಬಗ್ಗೆ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ ಈ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು.
50 ಸಾವಿರ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ನಡೆಯಲಿದೆಯೇ ಅಥವಾ 510 ಅಭ್ಯರ್ಥಿಗಳಿಗೆ ಮಾತ್ರ ಕಿರುಪರೀಕ್ಷೆ ನಡೆಯಲಿದೆಯೇ? ಇಲ್ಲವೇ ಸರ್ಕಾರದ ನಿರ್ಧಾರ ಏನಿದೆ? ನ್ಯಾಯಾಲಯ ಏನು ಆದೇಶ ನೀಡಲಿದೆ ಎಂಬುದು ಮಧ್ಯಾಹ್ನ ತಿಳಿಯಲಿದೆ.