Select Your Language

Notifications

webdunia
webdunia
webdunia
webdunia

ತಿಂಗಳಾಂತ್ಯಕ್ಕೆ ರೈತ ಶಕ್ತಿ ಯೋಜನೆಗೆ ಚಾಲನೆ

ತಿಂಗಳಾಂತ್ಯಕ್ಕೆ ರೈತ ಶಕ್ತಿ ಯೋಜನೆಗೆ ಚಾಲನೆ
ಬೆಂಗಳೂರು , ಮಂಗಳವಾರ, 17 ಜನವರಿ 2023 (08:57 IST)
ಬೆಂಗಳೂರು : ರೈತಾಪಿ ಕೃಷಿಕರ ಮೇಲಿನ ಹೊರೆ ತಪ್ಪಿಸುವ ಸಲುವಾಗಿ ಬಜೆಟ್ನಲ್ಲಿ ಘೋಷಿಸಿದಂತೆ ರೈತ ಶಕ್ತಿ ಯೋಜನೆಗೆ ಈ ತಿಂಗಳಾಂತ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
 
ರೈತರಿಗೆ ಕೃಷಿ ಯಾಂತ್ರೀಕರಣವು ಡೀಸೆಲ್ ಇಂಧನದ ಮೇಲೆ ಬಹುತೇಕ ಅವಲಂಬಿತವಾಗಿದೆ. ಹೀಗಾಗಿ ರೈತರ ಮೇಲಿನ ಆರ್ಥಿಕ ಹೊರೆ ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2022 -23 ನೇ ಸಾಲಿನ ಬಜೆಟ್ನಲ್ಲಿ ರೈತ ಶಕ್ತಿ ಯೋಜನೆಯನ್ನು ಪ್ರಕಟಿಸಲಾಗಿತ್ತು.

ಪ್ರತಿ ಎಕರೆಗೆ 250 ರೂ.ನಂತೆ ಗರಿಷ್ಠ ಐದು ಎಕರೆಗೆ ನೇರ ನಗದು ವರ್ಗಾವಣೆ ಮೂಲಕ ಡೀಸೆಲ್ ಸಹಾಯಧನವನ್ನು ನೀಡಲಾಗುತ್ತದೆ.

ಸುಮಾರು 45 ಲಕ್ಷಕ್ಕೂ ಹೆಚ್ಚಿನ ರೈತಾಪಿ ಕುಟುಂಬಗಳಿಗೆ ಡಿಬಿಟಿ ಮೂಲಕ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಸಿಎಂ ನೇರವಾಗಿ ಬಿಡುಗಡೆ ಮಾಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಲಾಖೆಯಲ್ಲಿ ನಡೆಯೋ ವಿಷಯ ಗೊತ್ತಿಲ್ಲವೇ? : ಹೆಚ್ಡಿಕೆ ವಾಗ್ದಾಳಿ