Select Your Language

Notifications

webdunia
webdunia
webdunia
webdunia

ಜನತೆಗೆ ಕರೆಂಟ್ ಶಾಕ್ !

ಜನತೆಗೆ  ಕರೆಂಟ್  ಶಾಕ್ !
ಬೆಂಗಳೂರು , ಶನಿವಾರ, 2 ಜುಲೈ 2022 (08:29 IST)
ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಸರ್ಕಾರ ಜನತೆಗೆ ಕರೆಂಟ್ ಶಾಕ್ ನೀಡಿದೆ.
 
ದರ ಏರಿಕೆ ನಿಯಮ ಇಂದಿನಿಂದಲೇ ಜಾರಿಯಾಗಿದೆ. ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ 19 ರಿಂದ 31 ಪೈಸೆ ಹೆಚ್ಚಳ ಮಾಡಲಾಗಿದೆ. ಪ್ರತಿ ತಿಂಗಳು 100 ಯೂನಿಟ್ ಬಳಸುವ ಗ್ರಾಹಕರು ಇನ್ಮುಂದೆ 19 ರಿಂದ 31 ರೂ. ಪಾವತಿಸಬೇಕು.

ಕಳೆದ 2 ವರ್ಷಗಳಲ್ಲಿ ಕಲ್ಲಿದ್ದಲು ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. 

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಸ್ಕಾಂಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಎಸ್ಕಾಂಗಳ ಮನವಿ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ದರ ಏರಿಕೆ ಮಾಡಿದೆ. 

ಪ್ರತಿ ಯೂನಿಟ್ಗೆ 38 ರಿಂದ 55 ಪೈಸೆಗೆ ಪ್ರಸ್ತಾವನೆ

– ಬೆಸ್ಕಾಂ 55.28 ಪೈಸೆ
– ಮೆಸ್ಕಾಂ 38.98 ಪೈಸೆ
– ಸೆಸ್ಕಾಂ 40.47 ಪೈಸೆ
– ಹೆಸ್ಕಾಂ 49.54 ಪೈಸೆ
– ಗೆಸ್ಕಾಂ 39.36 ಪೈಸೆ

Share this Story:

Follow Webdunia kannada

ಮುಂದಿನ ಸುದ್ದಿ

ಇಂಟರ್‌ನೆಟ್ ಸೇವೆ ಸ್ಥಗಿತ!