Publish Date: Thu, 30 Dec 2021 (07:26 IST)
Updated Date: Thu, 30 Dec 2021 (08:27 IST)
ಬೆಂಗಳೂರು : ಬೆಸ್ಕಾಂನಿಂದ ಬೆಂಗಳೂರಿನಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ನಡೆಸುತ್ತಿರುವುದರಿಂದ ಸಿಲಿಕಾನ್ ಸಿಟಿಯ ಹಲವು ಏರಿಯಾಗಳಲ್ಲಿ ಇಂದು ಮತ್ತು ನಾಳೆ ಪವರ್ ಕಟ್ ಇರಲಿದೆ.
ಬೆಂಗಳೂರಿನಾದ್ಯಂತ ಗುರುವಾರ ಮತ್ತು ಶುಕ್ರವಾರ ನಿರ್ವಹಣೆ ಮತ್ತು ಇತರ ಕೆಲಸಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿದೆ.
ಬೆಂಗಳೂರಿನ ಬನಶಂಕರಿ, ಜೆ.ಪಿ ನಗರ, ಯಶವಂತಪುರ, ಬಿಇಎಲ್ ಸೇರಿ ಹಲವು ಏರಿಯಾಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ಕರೆಂಟ್ ಇರುವುದಿಲ್ಲ.
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಸಂಗಮ್ ಸರ್ಕಲ್, ಎಲ್ಐಸಿ ಕಾಲೋನಿ, ಜೆಪಿ ನಗರ 1ನೇ ಹಂತ, ಬನಶಂಕರಿ 2ನೇ ಹಂತ, ಅಂಬೇಡ್ಕರ್ ನಗರ, ಎಸ್ಪಿ ರಸ್ತೆ, ಉತ್ತರಹಳ್ಳಿ ಮುಖ್ಯ ರಸ್ತೆ, ಜೆಪಿ ನಗರ 2 ನೇ ಹಂತ, 3 ನೇ ಹಂತ, 4 ನೇ ಹಂತ, 15 ನೇ ಹಂತ, ಕ್ರಾಸ್, ಡಾಲರ್ ಲೇಔಟ್, ಮುನಿರೆಡ್ಡಿ ಲೇಔಟ್, ಚಿಕ್ಕಲ್ಲಸಂದ್ರ ಬಸ್ ನಿಲ್ದಾಣ, ಸಿದ್ದಾಪುರ, ಈಜಿಪುರ, ಮಾರತ್ಹಳ್ಳಿ, ಸಂಜಯನಗರ, ಮಂಜುನಾಥ ನಗರ, ಅಶ್ವಥ್ ನಗರ ಮತ್ತು ಕೆಆರ್‌ಬಿ ಲೇಔಟ್ನಲ್ಲಿ ಪವರ್ ಕಟ್ ಇರಲಿದೆ.