Webdunia - Bharat's app for daily news and videos

Install App

ಮಳೆಯ ಆರ್ಭಟದ ನಡುವೆ ಪವರ ಕಟ್ ಸಮಸ್ಯೆ

Webdunia
ಗುರುವಾರ, 7 ಅಕ್ಟೋಬರ್ 2021 (09:37 IST)
ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಧಾರಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೇ ನಿನ್ನೆ ಸಹ ಭಾರೀ ಮಳೆಯಾಗಿದ್ದು, ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೂಡ  ನಗರದ ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಜನರು ಮಳೆಯಿಂದಾಗಿ ಪರದಾಡುತ್ತಿರುವ ಮಧ್ಯೆ ಬೆಸ್ಕಾಂ ಪ್ರತಿದಿನ ವಿವಿಧ ಪ್ರದೇಶಗಳಲ್ಲಿ ಪವರ್ ಕಟ್ ಮಾಡುತ್ತಿದ್ದು, ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿದಿನ ಒಂದೆಲ್ಲ ಒಂದು ಏರಿಯಾದಲ್ಲಿ ಪವರ್ ಕಟ್ ಸಮಸ್ಯೆಯಾಗುತ್ತಿದೆ. ಇಂದೂ ಕೂಡ ಕೆಲ ಏರಿಯಾಗಳಲ್ಲಿ ವಿದ್ಯುತ್ ಸಮಸ್ಯೆಯಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
 ಯಾವ್ಯವ ಪ್ರದೇಶಗಳಲ್ಲಿ ಪವರ್ ಕಟ್ ?
ಬೆಳತೂರ್, ಕಾಡುಗೋಡಿ ಅಂಬೇಡ್ಕರ್ ನಗರ ಜೆಪಿ ನಗರ 2 ನೇ ಹಂತ, ಕೊಡಿಗೇಹಳ್ಳಿ, ಸರ್ಕಾರಿ ಶಾಲೆಯ ಸುತ್ತಮುತ್ತಲಿನ ಪ್ರದೇಶ, ವಾಜರಹಳ್ಳಿ, ಗಜಾರೆ ಲೇಔಟ್, ಎಂಜಿ ರಸ್ತೆ, ಕಾವೇರಿ ಲೇಔಟ್ ಹಾಗೂ ಗಾಯತ್ರಿ ಲೇಔಟ್, ಬಸವನಪುರ, ಕೆಆರ್ ಪುರಂ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಆಶಿರ್ವಾದ್ ಲೇಔಟ್, ಆಮ್ಕೋ ಲೇಔಟ್, ಕೊಡಿಗೇಹಳ್ಳಿ ಅಂಬೇಡ್ಕರ್ ನಗರ, ವೈಟ್ಫೀಲ್ಡ್ , ಮಾರುತಿ ವಿಸ್ತರಣೆ, ರಾಜೀವ್ ನಗರ, ಪಟಾಲಮ್ಮ ವಿಸ್ತರಣೆ, ಮಾಲೂರು , ರಾಹುತನಹಳ್ಳಿ, ಲಕ್ಕೇನಹಳ್ಳಿ ಸೇರಿದಂತೆ ನೆಲಮಂಗಲದ ಸುತ್ತ ಮುತ್ತಲಿನ ಏರಿಯಾಗಳಲ್ಲಿ ಪವರ್ ಕಟ್ ಆಗಲಿದೆ.
ಗಂಗೊಂಡನಹಳ್ಳಿ, ನಾಯಂಡನಹಳ್ಳಿ, ದತ್ತಾತ್ರೇಯ ನಗರ, ಯಶವಂತಪುರ , ಹೊಸಕೆರೆಹಳ್ಳಿ, ಚನ್ನಸಂದ್ರ, ಕಾಡುಗೋಡಿ, ವಿನಾಯಕ ಲೇಔಟ್, ಮೇದರಹಳ್ಳಿ, ಸೋಲದೇವನಹಳ್ಳಿ  ಹಾಗೂ ಹೆನ್ನೂರ್ ಕ್ರಾಸ್, ಕೊಥನೂರ್ ಮತ್ತು ಸುತ್ತಮುತ್ತಲಿನ ಪ್ರದೇಶದ ಜನರು ವಿದ್ಯುತ್ ಸಮಸ್ಯೆ ಎದುರಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಬೆಸ್ಕಾಂ ನಡೆಗೆ ಜನರ ಆಕ್ರೋಶ
ಬೆಂಗಳೂರಿನ ಜನರಿಗೆ ಪವರ್ ಕಟ್ ಸಮಸ್ಯೆ ಹೊಸದಲ್ಲ. ಕಳೆದ ಒಂದು ವಾರದಿಂದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ.  ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.
ದಿನದಲ್ಲಿ ಒಂದೆರೆಡು ಗಂಟೆಗಳಾದರೇ ಹೇಗೆ ಸಂಭಾಳಿಸಬಹುದು ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ.  ಅಲ್ಲದೇ ಕೇವಲ ಒಂದು ದಿನ ಮಾತ್ರ ವಾಗಿದ್ದರೂ ಹೇಗೆ ಸಾಧ್ಯವಿತ್ತು ಆದರೆ ಕಳೆದ ಒಂದು ವಾರಗಳಿಂದ ವಿದ್ಯುತ್ ಸಮಸ್ಯೆಯಾಗಿದ್ದು, ಸಂಭಾಳಿಸುವುದು  ಅಸಾಧ್ಯ ಎಂಬುದು ಜನರ ವಾದ.  ಬೆಸ್ಕಾಂನ ಈ ನಡೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments