Select Your Language

Notifications

webdunia
webdunia
webdunia
Saturday, 5 April 2025
webdunia

ಗಮನಿಸಿ : ಇಂದು ಯಾವ ಯಾವ ಏರಿಯಾಗಳಲ್ಲಿ ಪವರ್ ಕಟ್!

ಬೆಂಗಳೂರು
ಬೆಂಗಳೂರು , ಭಾನುವಾರ, 6 ಫೆಬ್ರವರಿ 2022 (06:30 IST)
ಬೆಂಗಳೂರು : ಬೆಂಗಳೂರಿನ ಹಲವು ಏರಿಯಾಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಇಂದಿನಿಂದ ಫೆ. 6ರವರೆಗೆ ಪವರ್ ಕಟ್ ಇರಲಿದೆ.
 
ಇಂದಿನಿಂದ 3 ದಿನ ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಸಿಲಿಕಾನ್ ಸಿಟಿಯ ಜಯನಗರ, ಜೆ.ಪಿ. ನಗರ, ಕುಮಾರಸ್ವಾಮಿ ಲೇಔಟ್, ಬನಶಂಕರಿ, ಸದಾಶಿವನಗರ, ಬಸವನಗುಡಿ, ಎಸ್ಬಿಎಂ ಕಾಲೋನಿ, ವಿದ್ಯಾಪೀಠ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಇಂದು ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರ 4ನೇ ಬ್ಲಾಕ್, ವಿನಾಯಕನಗರ, ನಂಜಪ್ಪ ಸರ್ಕಲ್, ಗೌಡನಪಾಳ್ಯ, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸತಪುರ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ ಭಾಗಗಳು,

ಬನಶಂಕರಿ 2ನೇ ಹಂತ, ಜೆಪಿ ನಗರ 2ನೇ ಹಂತ, ಜೆ.ಪಿ. ನಗರ 3 ನೇ ಹಂತ, ಜೆಪಿ ನಗರ 4 ನೇ ಹಂತ, ಜೆಪಿ ನಗರ 5 ನೇ ಹಂತ, ಡಾಲರ್ಸ್ ಲೇಔಟ್, ಇಟ್ಟಮಡು, ಬನಶಂಕರಿ 5 ನೇ ಹಂತ, ವಿವೇಕ ನಗರ, ನಾಗಸಂದ್ರ, ಕೆಇಬಿ ಲೇಔಟ್, ಕುಂದಲಹಳ್ಳಿ ಗ್ರಾಮ, ಐಟಿಪಿಎಲ್ ಮುಖ್ಯ ರಸ್ತೆ, ದೊಡ್ಡ ನೆಕುಂದಿ, ಅಂಬೇಡ್ಕರ್ ನಗರ, ಮಲ್ಲಸಂಧ್ರಪುರ ರಸ್ತೆ, ಬಿಡಿಎ 9ನೇ ಹಂತ, ರಾಘವನಪಾಳ್ಯ, ವಸಂತ ವಲ್ಲಭ ನಗರ ಮತ್ತು ಪರಪ್ಪನ ಅಗ್ರಹಾರ ಮುಖ್ಯರಸ್ತೆಯಲ್ಲಿ ಕರೆಂಟ್ ಇರುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಂಗಪಟ್ಟಣ-ಗುಡ್ಡೆಹೊಸೂರು; 4 ಪಥ ರಸ್ತೆ ನಿರ್ಮಾಣಕ್ಕೆ ಶೀಘ್ರ ಚಾಲನೆ: ಪ್ರತಾಪ್ ಸಿಂಹ