Select Your Language

Notifications

webdunia
webdunia
webdunia
webdunia

ಚುನಾವಣೆ ಮುಂದೂಡಿಕೆ?

ಚುನಾವಣೆ  ಮುಂದೂಡಿಕೆ?
ನವದೆಹಲಿ , ಸೋಮವಾರ, 17 ಜನವರಿ 2022 (12:25 IST)
ನವದೆಹಲಿ : ರಾಜಕೀಯ ಪಕ್ಷಗಳ ಮನವಿಯ ಮೇರೆಗೆ ಪಂಜಾಬ್ ಚುನಾವಣಾ ದಿನಾಂಕವನ್ನು ಮುಂದೂಡಲಾಗಿದೆ.

ಗುರು ರವಿದಾಸ್ ಜಯಂತಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಒಟ್ಟಾಗಿ ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದವು.

ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಬೇಕಿತ್ತು. ಇದೀಗ ಈ ಚುನಾವಣೆಯನ್ನು ಆಯೋಗವು ಫೆ.20ಕ್ಕೆ ಮುಂದೂಡಿದೆ. ಹೀಗಾಗಿ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. 

ಬರುವ ತಿಂಗಳು ಚುನಾವಣೆ ಇರುವ ಹಿನ್ನೆಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ಇಂದು ಬೆಳಗ್ಗೆ ಸಭೆ ಕರೆದಿದ್ದವು. ಈ ವೇಳೆ ಚುನಾವಣಾ ದಿನಾಂಕ ಮುಂದೂಡುವಂತೆ ಒಮ್ಮತದ ಅಭಿಪ್ರಾಯ ಪಡೆದು ಅದನ್ನು ಆಯೋಗದ ಮುಂದಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯೋಗ ಚುನಾವಣಾ ದಿನಾಂಕವನ್ನು ಮುಂದಕ್ಕೆ ಹಾಕಿದ್ದು, ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ಲೀಲ ವರ್ತನೆ ಪ್ರಶ್ನಿಸಿದ್ದಕ್ಕೆ ಕೊಲ್ಲಲು ಮುಂದಾದ ವ್ಯಕ್ತಿ