Select Your Language

Notifications

webdunia
webdunia
webdunia
webdunia

ಪಂಚರಾಜ್ಯ ಚುನಾವಣೆ: ಜನವರಿ 22 ವರೆಗೆ ರ್‍ಯಾಲಿ ಮತ್ತು ರೋಡ್‌ಶೋಗಳು ನಿಷೇಧ

ಪಂಚರಾಜ್ಯ ಚುನಾವಣೆ: ಜನವರಿ 22 ವರೆಗೆ ರ್‍ಯಾಲಿ ಮತ್ತು ರೋಡ್‌ಶೋಗಳು ನಿಷೇಧ
bangalore , ಭಾನುವಾರ, 16 ಜನವರಿ 2022 (20:40 IST)
ಕೊರೊನಾ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚಾಗುತ್ತಿದ್ದಂತೆ ಐದು ರಾಜ್ಯಗಳಲ್ಲಿ ಚುನಾವಣೆಗೆ ಮುಂಚಿತವಾಗಿ ನಡೆಯುವ ರ್‍ಯಾಲಿಗಳು ಮತ್ತು ರೋಡ್‌ಶೋಗಳ ಮೇಲೆ ನಿಷೇಧ ಹೇರಲಾಗಿತ್ತು. ಇದೀಗ ಈ ನಿಷೇಧವನ್ನು ಜನವರಿ 22 ರವರೆಗೆ ವಿಸ್ತರಿಸಲಾಗಿದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.
ಒಳಾಂಗಣ ರಾಜಕೀಯ ಸಭೆಗಳು, 300 ಜನರ ಮಿತಿಗೆ ಒಳಪಟ್ಟು, ಸಭಾಂಗಣದ ಸಾಮರ್ಥ್ಯದ 50% ಅಥವಾ ರಾಜ್ಯದ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಗದಿಪಡಿಸಿದ ಮಿತಿಗೆ ಒಳಪಟ್ಟು ನಡೆಸಬಹುದಾಗಿದೆ.
ಜನವರಿ 8 ರಂದು ಚುನಾವಣಾ ಆಯೋಗವು ರ್‍ಯಾಲಿಗಳು, ರೋಡ್‌ಶೋಗಳು ಮತ್ತು ಇತರ ರೀತಿಯ ಸಾರ್ವಜನಿಕ ರಾಜಕೀಯ ಕಾರ್ಯಕ್ರಮಗಳನ್ನು ಜನವರಿ 15 (ಇಂದು) ವರೆಗೆ ನಿಷೇಧಿಸಲಾಗುವುದು ಮತ್ತು ನಂತರ ಈ ಆದೇಶವನ್ನು ಪರಿಶೀಲಿಸಲಾಗುವುದು ಎಂದು ಹೇಳಿತ್ತು.
ಚುನಾವಣಾ ಆಯೋಗವು ಇಂದು 11 ಗಂಟೆಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳೊಂದಿಗೆ, ಮಧ್ಯಾಹ್ನ 1 ಗಂಟೆಗೆ ಚುನಾವಣೆಗೆ ಒಳಪಟ್ಟ ಎಲ್ಲಾ ರಾಜ್ಯಗಳ ಮುಖ್ಯ ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಮತ್ತು ಮಧ್ಯಾಹ್ನ 1 ಗಂಟೆಗೆ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿತ್ತು.
ಒಕ್ಕೂಟ ಸರ್ಕಾರ, ರಾಜ್ಯ ಸರ್ಕಾರಗಳು, ಆರೋಗ್ಯ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಅಭಿಪ್ರಾಯಗಳನ್ನು ಪಡೆದ ನಂತರ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.
ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರದಲ್ಲಿ ಸಾಧ್ಯವಾದಷ್ಟು ಸುರಕ್ಷಿತವಾಗಿ ಚುನಾವಣೆಗಳನ್ನು ನಡೆಸುವ ಗುರಿಯನ್ನು ಹೊಂದಿರುವ ಕ್ರಮಗಳ ಭಾಗವಾಗಿ ರ್‍ಯಾಲಿಗಳು ಮತ್ತು ರೋಡ್‌ಶೋಗಳನ್ನು ನಿಷೇಧಿಸುವ ಆದೇಶವನ್ನು ಅಂಗೀಕರಿಸಲಾಗಿದೆ.
“ಅಭ್ಯರ್ಥಿಗಳು ಸಾಧ್ಯವಾದಷ್ಟು ಆನ್‌ಲೈನ್‌‌ ಮೂಲಕ ಪ್ರಚಾರ ನಡೆಸಬೇಕು… ಸಾರ್ವಜನಿಕ ರಸ್ತೆಗಳಲ್ಲಿ ಸಭೆಗಳು ಇರುವುದಿಲ್ಲ ಮತ್ತು ಮತ ಎಣಿಕೆಯ ನಂತರ ವಿಜಯೋತ್ಸವದ ಮೆರವಣಿಗೆ ಇರುವುದಿಲ್ಲ” ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಕಳೆದ ವಾರ ಹೇಳಿದ್ದರು.
ಯುಪಿ, ಪಂಜಾಬ್, ಗೋವಾ, ಮಣಿಪುರ ಮತ್ತು ಉತ್ತರಾಖಂಡ್‌ಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದು, ದೇಶದಾದ್ಯಂತ ಕೋವಿಡ್ ಪ್ರಕರಣಗಳ ಹೆಚ್ಚಳದ ನಡುವೆಯೇ ಚುನಾವಣೆಗಳು ನಡೆಯುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ನೈಟ್-ವೀಕೆಂಡ್ ಕರ್ಫ್ಯೂ: ಲೈಟೆ ಇಲ್ಲದ ಕಂಬಗಳಾಗಿರುವ ಸರಕಾರದ ರೂಲ್ಸುಗಳು