ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ವಾಕಿಂಗ್ಗಾಗಿ ಸಾಕು ನಾಯಿಗಳನ್ನು ತರಲು ಜುಲೈ 1 ರಿಂದ ನಿಷೇಧಿಸಲಾಗಿದೆ.
ಸಾಕು ನಾಯಿ ಮಾಲೀಕರು ಯಾವುದೇ ಕಾರಣಕ್ಕೂ ನಾಯಿಗಳನ್ನು ತಮ್ಮೊಂದಿಗೆ ತರುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ತೋಟಗಾರಿಕೆ ಇಲಾಖೆಯ ನಡೆಗೆ ಐಂದ್ರಿತಾ ರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಬ್ಬನ್ ಪಾರ್ಕ್ ಶುಚಿಯ ದೃಷ್ಟಿಯಿಂದ ನೀವು ಈ ಕ್ರಮವನ್ನು ತಗೆದುಕೊಂಡಿದ್ದೀರಿ ನಿಜ. ಆದರೆ ಆ ಎಚ್ಚರಿಕೆಯನ್ನು ನಾಯಿ ಮಾಲೀಕರೂ ತಗೆದುಕೊಳ್ಳುತ್ತೇವೆ. ಹಾಗಾಗಿ ನಿರ್ಣಯವನ್ನು ಮರುಪರಿಶೀಲಿಸಿ ಎಂದು ಟ್ವೀಟ್ ಮಾಡಿದ್ದಾರೆ.