Select Your Language

Notifications

webdunia
webdunia
webdunia
webdunia

ಉಡುಗೊರೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ: ಪ್ರಧಾನಿ ಮೋದಿ ಮನವಿ

ಉಡುಗೊರೆ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ: ಪ್ರಧಾನಿ ಮೋದಿ ಮನವಿ
ಲಖನೌ , ಭಾನುವಾರ, 19 ಸೆಪ್ಟಂಬರ್ 2021 (12:00 IST)
ಲಖನೌ : ಹಲವು ವರ್ಷಗಳಿಂದ ತಾವು ಪಡೆದ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಹರಾಜಿಗೆ ಇಡಲಾಗಿದ್ದು ಜನರು ಇದರಲ್ಲಿ ಭಾಗವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಹರಾಜಿನಿಂದ ಬರುವ ಹಣ 'ನವಾಮಿ ಗಂಗೆ' ಯೋಜನೆಗೆ ಬಳಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
'ಕೆಲವು ವರ್ಷಗಳಿಂದ ನಾನು ಹಲವಾರು ಉಡುಗೊರೆ ಮತ್ತು ಸ್ಮರಣಿಕೆಗಳನ್ನು ಸ್ವೀಕರಿಸಿದ್ದೇನೆ. ಇದನ್ನು ಹರಾಜು ಮಾಡಲಾಗುತ್ತಿದೆ. ಇದರಲ್ಲಿ ಒಲಿಂಪಿಕ್ ವಿಜೇತರು ನೀಡಿದ ವಿಶೇಷ ಸ್ಮರಣಿಕೆಗಳೂ ಇದ್ದು ಜನರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು' ಎಂದು ಟ್ವೀಟ್ ಮಾಡಿದ್ದಾರೆ.
ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನದ ಗುರಿಯನ್ನು 'ನವಾಮಿ ಗಂಗೆ' ಯೋಜನೆ ಹೊಂದಿದೆ.
ಸಂಸ್ಕೃತಿ ಸಚಿವಾಲಯವು ಕೈಗೊಂಡ ಹರಾಜು ಪ್ರಕ್ರಿಯೆಯಲ್ಲಿ ಕ್ರೀಡಾ ಸಲಕರಣೆಗಳು ಮತ್ತು ಕೃಷ್ಣಾನಗರದ ಬಾಡ್ಮಿಂಟನ್ ರಾಕೆಟ್ಗಳೂ ಸೇರಿದ್ದು ಇ- ಹರಾಜಿನಲ್ಲಿ ಗರಿಷ್ಠ ಬಿಡ್ಗಳನ್ನು ಕಂಡಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜಸ್ಥಾನದ ಕನಿಷ್ಟ 50 ಪೊಲೀಸರು ಲೈಂಗಿಕ ಅಪರಾಧಗಳಲ್ಲಿ ಶಾಮೀಲು!