Select Your Language

Notifications

webdunia
webdunia
webdunia
webdunia

ಯುಪಿಯಲ್ಲಿ 60%ಗಿಂತ ಅಧಿಕ ಮತದಾನ

ಯುಪಿಯಲ್ಲಿ 60%ಗಿಂತ ಅಧಿಕ ಮತದಾನ
ಪಂಜಾಬ್ , ಸೋಮವಾರ, 21 ಫೆಬ್ರವರಿ 2022 (08:10 IST)
ಲಖನೌ : ಪಂಜಾಬ್ ವಿಧಾನಸಭೆಯ ಎಲ್ಲ 117 ಕ್ಷೇತ್ರಗಳು ಹಾಗೂ ಉತ್ತರ ಪ್ರದೇಶ ವಿಧಾನಸಭೆಗೆ ಭಾನುವಾರ ನಡೆದ ಮೂರನೇ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ ಪಂಜಾಬ್ನಲ್ಲಿ ಶೇ.64.27 ಹಾಗೂ ಉತ್ತರ ಪ್ರದೇಶದಲ್ಲಿ ಶೇ.60.08ರಷ್ಟು ಮತದಾನವಾಗಿದೆ.

ಅಮೃತಸರ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಶಿರೋಮಣಿ ಅಕಾಲಿ ದಳ (ಎಸ್ಎಡಿ) ವಿಕ್ರಮ್ ಸಿಂಗ್ ಮಜಿಥಿಯಾ ಅವರು ಭಾನುವಾರ ಮತಗಟ್ಟೆಯಲ್ಲಿ ಭೇಟಿಯಾಗಿದ್ದು, ಕೆಲ ಹೊತ್ತು ಉಭಯ ಕುಶಲೋಪರಿ ನಡೆಸಿದರು.

ಚುನಾವಣೆಗೂ ಮುನ್ನ ಉಭಯ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರೂ ಭೇಟಿ ವೇಳೆ ನಗುನಗುತ್ತಾ ಕುಶಲೋಪರಿ ನಡೆಸಿದರು. ನಗರದ ವರ್ಕಾ ಪ್ರದೇಶದಲ್ಲಿ ಮತದಾನ ಮಾಡಲು ತೆರಳಿದ್ದಾಗ ಇಬ್ಬರು ನಾಯಕರು ಭೇಟಿಯಾದರು.

Share this Story:

Follow Webdunia kannada

ಮುಂದಿನ ಸುದ್ದಿ

ಗೂಂಡಾಗಳ ವಿರುದ್ಧ ಕ್ರಮ?