Select Your Language

Notifications

webdunia
webdunia
webdunia
webdunia

ಶಿವಮೊಗ್ಗದಲ್ಲಿ ಡ್ರೋಣ್ಗಳ ಕಾರ್ಯಾಚರಣೆ

ಶಿವಮೊಗ್ಗದಲ್ಲಿ ಡ್ರೋಣ್ಗಳ ಕಾರ್ಯಾಚರಣೆ
ಶಿವಮೊಗ್ಗ , ಗುರುವಾರ, 24 ಫೆಬ್ರವರಿ 2022 (07:03 IST)
ಶಿವಮೊಗ್ಗ : ಹಿಂದು ಸಂಘಟನೆಯ ಕಾರ್ಯಕರ್ತ ಹರ್ಷ ಹತ್ಯೆ ಸಂಬಂಧ ಬಂಧಿತರ ಸಂಖ್ಯೆ 8ಕ್ಕೆ ಏರಿದೆ. 8ನೇ ಆರೋಪಿ ಫರಾನ್ ಪಾಷಾನನ್ನು ವಶಕ್ಕೆ ಪಡೆಯಲಾಗಿದೆ.
ಶಿವಮೊಗ್ಗ ನಗರದಲ್ಲಿ ಈಗಾಗಲೇ ಕರ್ಫ್ಯೂ ಜಾರಿಮಾಡಲಾಗಿದ್ದು ಸದ್ಯ ಶಾಂತಿ ನೆಲೆಸಿದ್ದು, ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದೆ. ಆದರೂ, ಶುಕ್ರವಾರ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಮುಮದುವರಿಯಲಿದೆ. ಶಿವಮೊಗ್ಗ ನಗರ ಸೇರಿದಂತೆ ಇಡೀ ಜಿಲ್ಲೆಯ ಮೇಲೆ ಪೊಲೀಸ್ ಹದ್ದಿನಕಣ್ಣು ಇಡಲಾಗಿದೆ.

ಹರ್ಷ ಕೊಲೆ ಬೆನ್ನಲ್ಲೇ ಎಚ್ಚೆತ್ತ ಶಿವಮೊಗ್ಗ ಪೊಲೀಸರು ಇವತ್ತು ಹೈವೋಲ್ಟೇಜ್ ಸಭೆ ನಡೆಸಿದ್ರು. ಕರ್ಫ್ಯೂ ಮುಂದುವರಿಸಬೇಕಾ? ಬೇಡ್ವಾ? ಜೊತೆಗೆ ಕಳೆದೆರಡು ದಿನಗಳಲ್ಲಾದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. 

ಇಂದು ಮಹತ್ವದ ಬದಲಾವಣೆಯೊಂದು ನಡೆದಿದ್ದು, ಶಿವಮೊಗ್ಗ ಕಾನೂನು ಸುವ್ಯವಸ್ಥೆ ಹೊಣೆಯನ್ನು ಮುರುಗನ್ ಬದಲಿಗೆ ರಮಣ್ ಗುಪ್ತಾಗೆ ವಹಿಸಲಾಗಿದೆ. ಸದ್ಯ ಜಿಲ್ಲಾದ್ಯಂತ ಬಿಗಿಭದ್ರತೆ ಒದಗಿಸಲಾಗಿದ್ದು ಡ್ರೋಣ್ ಮೂಲಕ ಕಟ್ಟೆಚ್ಚರ ವಹಿಸಿದೆ. ಒಟ್ಟು 7 ಡ್ರೋಣ್ ಕಾರ್ಯಾಚರಣೆ ನಡೆಸ್ತಿದ್ದು, ಒಂದೊಂದು ಡ್ರೋಣ್ 5 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯನಿರ್ವಸುತ್ತಿದೆ. ಮತ್ತೊಂದ್ಕಡೆ ನಗರದಾದ್ಯಂತ ಡಿಸಿ, ಎಸ್ಪಿ ಸಿಟಿ ರೌಂಡ್ಸ್ ನಡೆಸಿದರು. 

 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಅತೀ ದೊಡ್ಡ ಆರ್ಥಿಕತೆಯ ದೇಶವಾಗಲಿದೆ: ಅಂಬಾನಿ