Publish Date: Tue, 22 Feb 2022 (11:16 IST)
Updated Date: Tue, 22 Feb 2022 (12:53 IST)
ಶಿವಮೊಗ್ಗದ ವಾತಾವರಣವನ್ನ ನಾಳೆವರೆಗೆ ನೋಡಲಾಗುತ್ತದೆ.
ಆ ಬಳಿಕ 144 ಸೆಕ್ಷನ್ ಮುಂದುವರಿಸಬೇಕಾ ಬೇಡ್ವಾ ಅಂತಾ ತೀರ್ಮಾನ ಮಾಡಲಾಗುತ್ತೆ. ಎಲ್ಲಾ ಕಡೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಐಪಿಸಿ 120 ಬಿ ಹಾಕದಿರುವ ಬಗ್ಗೆ ಮುಂದಿನ ಹಂತದಲ್ಲಿ ನೋಡ್ತೀವಿ.
ಕಲ್ಲು ತೂರಾಟ, ಸಮಾಜದ ಸ್ವಾಸ್ಥ್ಯ ಹಾಳು ಮಾಡಿದವರ ಮೇಲೆ ಎಫ್ಐಆರ್ ಮಾಡಿ ಕಠಿಣ ಕ್ರಮ ಕೈಗೊಳ್ತೀವಿ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಎಸ್ಪಿ ಲಕ್ಷ್ಮಿಪ್ರಸಾದ್ ಮಾತನಾಡಿ, ನಿನ್ನೆ ಗಲಭೆಗೆ ಸಂಬಂಧಿಸಿದಂತೆ 9 ಪ್ರಕರಣಗಳು ದಾಖಲಾಗಿವೆ. ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ. ಜಿಲ್ಲೆಯಾದ್ಯಂತ 50 ಚೆಕ್ ಪೋಸ್ಟ್ ಮಾಡಲಾಗಿದೆ.
ಚಿಕ್ಕಮಗಳೂರು, ದಾವಣಗೆರೆ ಹಾಗೂ ಬೆಂಗಳೂರಿನಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದರು.