Publish Date: Sat, 08 Oct 2022 (08:12 IST)
Updated Date: Sat, 08 Oct 2022 (09:15 IST)
ಬೆಂಗಳೂರು : ನಗರದಲ್ಲಿ ಓಲಾ, ಉಬರ್ ಆಟೋದಲ್ಲಿ ಓಡಾಡ್ತಿರೋರಿಗೆ ಇನ್ಮುಂದೆ ಆ್ಯಪ್ನಲ್ಲಿ ಸಿಗೋದು ಡೌಟ್.
ದುಪ್ಪಟ್ಟು ದರ ವಿಧಿಸುತ್ತಿದ್ದ ಆ್ಯಪ್ ಆಟೋಗಳ ವಿರುದ್ಧ ಸಾರಿಗೆ ಇಲಾಖೆಯೇ ಖುದ್ದು ಸಮರ ಸಾರಿ, ನೋಟಿಸ್ ಜಾರಿ ಮಾಡಿದೆ.
ಆಟೋಗಳ ಮಿನಿಮಮ್ ಜಾರ್ಜ್ 30 ರೂ. ಇದೆ. ಆದರೆ, ಓಲಾ-ಉಬರ್ ಆಟೋಗಳು 100 ರೂಪಾಯಿ ವಸೂಲಿ ಮಾಡುತ್ತಿವೆ. ಈ ಬಗ್ಗೆ, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ದೂರು ಕೇಳಿಬಂದಿತ್ತು. ಹೀಗಾಗಿ ರಸ್ತೆ ಸುರಕ್ಷತಾ ವಿಭಾಗದಲ್ಲಿ ಆ್ಯಪ್ ಸಂಸ್ಥೆಗಳಿಗೆ ನೋಟಿಸ್ ನೀಡಿದೆ.
3 ದಿನದೊಳಗೆ ವಿವರಣೆ ಸಲ್ಲಿಸಬೇಕು. ಇಲ್ಲದೇ ಇದ್ದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದೆ.