ರೈಲು ಪ್ರಯಾಣಿಕರ ಗಮನಕ್ಕೆ

Webdunia
ಭಾನುವಾರ, 10 ಅಕ್ಟೋಬರ್ 2021 (13:35 IST)
ನವದೆಹಲಿ : ವರ್ಚ್ಯುಯಲ್ ಪ್ರೈವೆಟ್ ಸರ್ವರ್ (ವಿಪಿಎಸ್) ಬಳಕೆ ಮಾಡಿ ಆನ್ ಲೈನ್ ಮೂಲಕ ಟಿಕೆಟ್ ಕಾಯ್ದಿರಿಸುವವರಿಗೆ ಇನ್ನು ಮುಂದಿನ ದಿನಗಳಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸಾಧ್ಯವಾಗುವುದಿಲ್ಲ.

ಆನ್ ಲೈನ್ ಟಿಕೆಟ್ ಗಳನ್ನು ಖರೀದಿಸುವುದಕ್ಕೆ ಅಕ್ರಮವಾಗಿ ಸಾಫ್ಟ್ ವೇರ್ ಬಳಕೆ ಮಾಡಲಾಗುತ್ತಿರುವುದನ್ನು ನಿರಂತರವಾಗಿ ಗಮನಿಸುತ್ತಿದ್ದ ರೈಲ್ವೆ ಸಚಿವಾಲಯ ಟಿಕೆಟ್ ಬುಕ್ ಮಾಡುವವರು ವಿಪಿಎಸ್ ಮೂಲಕ ಐಪಿಯನ್ನು ಗೌಪ್ಯವಾಗಿರಿಸಿ ಟಿಕೆಟ್ ಕಾಯ್ದಿರಿಸುತ್ತಿದ್ದರು. ಈ ಮೂಲಕ ನೈಜ ಲೊಕೇಷನ್ ಗಳ ಪತ್ತೆ ಕಷ್ಟಸಾಧ್ಯವಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯ ತನ್ನದೇ ಸ್ವಾಮ್ಯದ ಟಿಕೆಟ್ ಕಾಯ್ದಿರಿಸುವ ವೆಬ್ ಸೈಟ್ ಆದ (ಐಆರ್ ಸಿಟಿಸಿ) ಹಾಗೂ ಸೆಂಟರ್ ಫಾರ್ ರೈಲ್ವೆ ಇನ್ಫೋರ್ಮೇಷನ್ ಸಿಸ್ಟಮ್ಸ್ (ಸಿಆರ್ ಐಎಸ್) ಗೆ ವಿಪಿಎಸ್ ಮೂಲಕ ಬರುವ ಟ್ರಾಫಿಕ್ ನ್ನು ಪ್ರಮುಖವಾಗಿ ವೆಬ್ ಸೇವೆಗಳಿಂದ ಬರುವ ಟ್ರಾಫಿಕ್ ನ್ನು ನಿರ್ಬಂಧಿಸಲು ಸೂಚನೆ ನೀಡಿದೆ. ಟೌಟಿಂಗ್ ಚಟುವಟಿಕೆಗಳನ್ನು ತಡೆಯುವುದಕ್ಕಾಗಿ ಮುಂಬೈ ನ್ನು ಡೀಫಾಲ್ಟ್ IP ವಿಳಾಸವನ್ನಾಗಿ ನಿಗದಿಪಡಿಸಲಾಗಿದೆ.
ನಿಯಮಿತ ಪ್ರಯಾಣಿಕರು/ಏಜೆಂಟ್ ಗಳು ಈ ವಿಪಿಎಸ್ ನ್ನು ಟಿಕೆಟ್ ಕಾಯ್ದಿರಿಸುವುದಕ್ಕೆ ಬಳಕೆ ಮಾಡುವುದಿಲ್ಲ. ಆದ್ದರಿಂದ ವಿಪಿಎಸ್ ನ್ನು ಟೌಟಿಂಗ್ ಚಟುವಟಿಕೆಗಳ ನಿರ್ಬಂಧಿಸುವುದಕ್ಕಾಗಿ ಬಳಕೆ ಮಾಡಬಹುದು ಎಂದು ರೈಲ್ವೆ ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದು ದೇಶ ಒಂದು ಚುನಾವಣೆ’ ಜಾರಿ- ಬಿಜೆಪಿ ಮನವಿ

ಮೇ ಅಂತ್ಯದೊಳಗೆ ಸಂಪುಟ ವಿಸ್ತರಣೆ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಬಸವರಾಜ ರಾಯರಡ್ಡಿ

ದಾಖಲೆಗಳಿಲ್ಲದಿದ್ದರೂ ರೈಲಿನಲ್ಲಿ ಪ್ರಯಾಣ: ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ನಾಲ್ವರು ಬಾಂಗ್ಲಾರು ಅರೆಸ್ಟ್‌

ಎರಡ್ಮೂರು ವಾರಗಳಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆಯಲ್ಲಿ ಮತ್ತೇ ಶಾಕ್‌

ಸುವೆಂದು ಅಧಿಕಾರಿಗಿಂತ ಉತ್ತಮ ಸಿಎಂ ಯಾರೂ ಇರಲಾರರು: ನಟ ಮಿಥುನ್ ಚಕ್ರವರ್ತಿ

ಮುಂದಿನ ಸುದ್ದಿ
Show comments