Select Your Language

Notifications

webdunia
webdunia
webdunia
webdunia

ಗಮನಿಸಿ : ಇನ್ಮುಂದೆ ಮನೆ ಮುಂದೆ ವಾಹನ ನಿಲ್ಲಿಸಿದ್ರೆ ಟ್ಯಾಕ್ಸ್!

ಗಮನಿಸಿ : ಇನ್ಮುಂದೆ ಮನೆ ಮುಂದೆ ವಾಹನ ನಿಲ್ಲಿಸಿದ್ರೆ ಟ್ಯಾಕ್ಸ್!
ಬೆಂಗಳೂರು , ಗುರುವಾರ, 1 ಸೆಪ್ಟಂಬರ್ 2022 (07:17 IST)
ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಬಿಬಿಎಂಪಿಗೆ ಆಗುತ್ತಿಲ್ಲ. ಆದರೆ, ಸಿಕ್ಕಸಿಕ್ಕಿದ್ದಕ್ಕೆಲ್ಲಾ ತೆರಿಗೆ ಹಾಕೋ ಚಾಳಿ ಮಾತ್ರ ಮುಂದುವರೆಸಿದೆ.
 
ಕಳೆದ ವರ್ಷ ಭಾರೀ ಆಕ್ರೋಶದ ನಂತರ ಕೈಬಿಟ್ಟಿದ್ದ ಪಾರ್ಕಿಂಗ್ ಟ್ಯಾಕ್ಸ್ ನೀತಿಯನ್ನು ಇದೀಗ ಜಾರಿ ಮಾಡೋಕೆ ಪ್ರಯತ್ನ ನಡೆಸಿದೆ.

ಮನೆ ಮುಂದಿನ ರಸ್ತೆಯಲ್ಲಿ ಬೈಕ್, ಕಾರು, ಆಟೋ, ಟೆಂಪೋ, ಟ್ಯಾಕ್ಸಿ ನಿಲ್ಲಿಸುವುದಕ್ಕೆ ಪಾರ್ಕಿಂಗ್ ತೆರಿಗೆ ಹಾಕಲು ಪ್ಲಾನ್ ಮಾಡುತ್ತಿದೆ. ಟ್ರಾಫಿಕ್ ಜಾಮ್ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ನೆಪದಲ್ಲಿ 2020ರಲ್ಲಿ ಭೂಸಾರಿಗೆ ನಿರ್ದೇಶನಾಲಯ ನೀಡಿದ್ದ ವರದಿಯ ಅನುಷ್ಠಾನಕ್ಕೆ ಮುಂದಾಗಿದೆ.

ಮುಂದಿನ ವಾರದೊಳಗೆ ಪಾರ್ಕಿಂಗ್ ಶುಲ್ಕ ವಿಧಿಸುವ ನೀತಿಯನ್ನು ಜಾರಿಗೆ ತರಲು ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಆದರೆ, ಇದಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿ 10 ಗಂಟೆ ನಂತರ ಕಾರ್ಯಕ್ರಮಕ್ಕೆ ಅವಕಾಶವಿಲ್ಲ!