ನವದೆಹಲಿ : ಯುಎಸ್ ವೀಸಾ ಪಡೆಯಲು ಪರದಾಡುತ್ತಿದ್ದ ಭಾರತೀಯರಿಗೆ ಅಮೆರಿಕ ರಾಯಭಾರ ಕಚೇರಿ ಗುಡ್ ನ್ಯೂಸ್ ನೀಡಿದೆ.
ಅಮೆರಿಕ ವೀಸಾ ಪಡೆಯಲು ಇನ್ಮುಂದೆ ಭಾರತೀಯರು ಸುದೀರ್ಘ ಅವಧಿವರೆಗೆ ಕಾಯುವ ಪರಿಸ್ಥಿತಿ ಇರಲ್ಲ ಎಂದು ತಿಳಿಸಿದೆ.
ಅಮೆರಿಕ ವೀಸಾ ಪಡೆಯಲು ಭಾರತೀಯರು 500 ದಿನಗಳಿಗೂ ಹೆಚ್ಚು ಕಾಲ ಕಾಯುವಂತಿತ್ತು. ಈ ದೀರ್ಘಾವಧಿ ಕಾಯುವಿಕೆಗೆ ಕಡಿವಾಣ ಹಾಕಲು ಅಮೆರಿಕ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಈ ಕುರಿತು ಅಮೆರಿಕ ರಾಯಭಾರ ಕಚೇರಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.