Publish Date: Tue, 14 Aug 2018 (15:28 IST)
Updated Date: Tue, 14 Aug 2018 (15:30 IST)
ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಇಡೀ ದೇಶ ಮುಳುಗಿದ್ದರೆ, ಕರಾವಳಿಯ ಶಾಲೆಯ ಮಕ್ಕಳಿಗೆ ಮಾತ್ರ ಈ ಭಾಗ್ಯವಿಲ್ಲ.
ಮಳೆಯಿಂದಾಗಿ ಕಳೆದ ಶುಕ್ರವಾರದಿಂದ ಶಾಲೆಗೆ ನಿರಂತರ ರಜೆ ಘೋಷಿಸಲಾಗಿದೆ. ವಿಪರೀತ ಮಳೆಯಿಂದಾಗಿ ಮನೆಯಿಂದ ಹೊರಗೆ ಬರುವ ಪರಿಸ್ಥಿತಿಯಲ್ಲಿಲ್ಲ. ಹೀಗಿರುವಾಗ ಸ್ವಾತಂತ್ರ್ಯೋತ್ಸವ ಎಲ್ಲಿಂದ ಬಂತು?
ಹೆಚ್ಚಿನ ಶಾಲೆಗಳು ಔಪಚಾರಿಕವಾಗಿ ಧ್ವಜಾರೋಹಣ ಮಾಡಿ ಉಳಿದ ಕಾರ್ಯಕ್ರಮಗಳನ್ನು ರದ್ದುಗೊಳಿಸಲು ತೀರ್ಮಾನಿಸಿವೆ. ಇದರಿಂದಾಗಿ ಪ್ರತೀ ವರ್ಷದಂತೇ ಸಂಭ್ರಮದಿಂದ ನಡೆಯಬೇಕಿದ್ದ ಸ್ವಾತಂತ್ರ್ಯೋತ್ಸವ ಈ ಬಾರಿ ಕರಾವಳಿಯ ಮಕ್ಕಳಿಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.