Select Your Language

Notifications

webdunia
webdunia
webdunia
webdunia

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಸ್ಮಾರಕ ನಿರ್ಮಾಣವಾಗಿದ್ದೆಲ್ಲಿ ಗೊತ್ತಾ?

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವದ ಸ್ಮಾರಕ ನಿರ್ಮಾಣವಾಗಿದ್ದೆಲ್ಲಿ ಗೊತ್ತಾ?
ಬಳ್ಳಾರಿ , ಮಂಗಳವಾರ, 7 ಆಗಸ್ಟ್ 2018 (15:03 IST)
ಬಳ್ಳಾರಿಯ ಗಾಂಧಿಭವನದ ಮುಂದೆ 70 ನೇ ಸ್ವಾತಂತ್ಯ ದಿನಾಚರಣೆಯ ಹಿನ್ನಲೆಯಲ್ಲಿ ಪ್ರಜಾ ಪ್ರಭುತ್ವ ಮಾದರಿಯನ್ನು ನಿರ್ಮಿಸಲಾಗಿದೆ. ಇತಿಹಾಸವನ್ನು ಮುಂದಿನ ಪೀಳಿಗೆ ತಿಳಿಸುವ ನಿಟ್ಟಿನಲ್ಲಿ ಸ್ಮಾರಕದ ನಿರ್ಮಾಣವನ್ನು ಬೆಳಗಾವಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಗಾಂಧಿವಾಧಿ 97 ವರ್ಷದ ಗಂಗಪ್ಪ ಮುದ್ದಪ್ಪ ಮಾಳಿಗಿ ಅಗಸ್ಟ್ 9 ರಂದು ಉದ್ಟಾಟಿಸಲಿದ್ದಾರೆ. ಹೀಗಂತ ಗಾಂಧಿ ಭವನದ  ಸಂಚಾಲಕ ಟಿ.ಜಿ.ವಿಠ್ಠಲ್ ತಿಳಿಸಿದ್ದಾರೆ.

ನಗರದ ಗಾಂಧಿಭವನದಲ್ಲಿ ಮಾತನಾಡಿದ ಅವರು,  ಪ್ರಜಾಪ್ರಭುತ್ವವನ್ನು ಬಲಪಡಿಸಲು ಇತಿಹಾಸವನ್ನು  ಇಂದಿನ ಹಾಗೂ ಮುಂದಿನ ಪೀಳಿಗೆಗೆ ಹಸ್ತಾತಂತರಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ  ಸ್ವಾತಂತ್ರ್ಯ ಭಾರತ 70 ವರ್ಷಗಳ ಆಚರಣೆ ಐತಿಹಾಸಿಕ  ಮೈಲುಗಲ್ಲು ಆಗಿಸುವ ನಿಟ್ಟಿನಲ್ಲಿ  ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಬಳ್ಳಾರಿಯ ಸೆಂಟ್ರಲ್ ಜೈಲು. ಕೇಂದ್ರ ಕಾರಗ್ರಹ ಹಾಗೂ ಅಲ್ಲೀಪರ  ಜೈಲುಗಳಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಇಡಲಾಗಿತ್ತು. ಅನೇಕ ನಾಯಕರು ಈ ಸ್ಥಳದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಷಣ ಮಾಡಿದ ನೆನಪಿಗಾಗಿ ಹಾಗೂ  ಪ್ರಜಾ ಪ್ರಭುತ್ವದ ನಾಲ್ಕು ಅಂಗಗಳನ್ನು ಎತ್ತಿಹಿಡಿಯುವ ಸಲುವಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಆ.9 ರಂದು ಹಿರಿಯ ಗಾಂಧಿವಾದಿ ಮಾಳಗಿ ಉದ್ಟಾಟಿಸಲಿದ್ದಾರೆ ಎಂದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್ ಬಂಕ್‌ನಲ್ಲಿ ಗೋಕಳ್ಳರ ಅಟ್ಟಹಾಸ; ಸಿ.ಸಿ. ಟಿವಿ ದೃಶ್ಯ ವೈರಲ್!