Select Your Language

Notifications

webdunia
webdunia
webdunia
webdunia

ಡೆಲ್ಟಾ ಪ್ಲಸ್ ಆತಂಕ ಬೇಡ, ಅಪಯಕಾರಿ ವೈರಸ್ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR !

ಡೆಲ್ಟಾ ಪ್ಲಸ್ ಆತಂಕ ಬೇಡ, ಅಪಯಕಾರಿ ವೈರಸ್ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR !
ನವದೆಹಲಿ , ಸೋಮವಾರ, 2 ಆಗಸ್ಟ್ 2021 (16:54 IST)
ನವದೆಹಲಿ(.02): ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣ ದಿಢೀರ್ ಹೆಚ್ಚಾಗಿದೆ. ಕಳೆದ 6 ದಿನಗಳಿಂದ ಭಾರತದಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಇದೀಗ 3ನೇ ಅಲೆ ಆತಂಕ ಹೆಚ್ಚಾಗುತ್ತಿದೆ. ಇದರ ನಡುವೆ ಡೆಲ್ಟಾ ಪ್ಲಸ್ ವೈರಸ್ ಕಾಟವೂ ಹೆಚ್ಚಾಗುತ್ತಿದೆ.

•ದೇಶದಲ್ಲಿ ಮತ್ತೆ ಕೊರೋನಾ ವೈರಸ್ ಪ್ರಕರಣ ಸಂಖ್ಯೆ ಹೆಚ್ಚಳ
•ಡೆಲ್ಟಾ ಪ್ಲಸ್ ಆತಂಕಕ್ಕೆ Iಅಒಖ ಅಧ್ಯಯನ ವರದಿ ನೀಡಿದ ಸಮಾಧಾನ
•ಡೆಲ್ಟಾ ಪ್ಲಸ್ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಎಂದ ICMR
ಡೆಲ್ಟಾ ಪ್ಲಸ್ ಆತಂಕಕ್ಕೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ಅಧ್ಯಯನ ವರದಿ ಸಮಾಧಾನ ತಂದಿದೆ.
ಡೆಲ್ಟಾ ಪ್ಲಸ್ ವೇರಿಯೆಂಟ್ ವಿರುದ್ದ ಭಾರತ್ ಬಯೋಟೆಕ್ನ ಕೋವಾಕ್ಸಿನ್ ಲಸಿಕೆ ಪರಿಣಾಮಕಾರಿ ಎಂದು ICMRಅಧ್ಯಯನ ವರದಿ ಹೇಳಿದೆ. ICMRನಡೆಸಿದ ಅಧ್ಯಯನ ವರದಿಯಲ್ಲಿ ಕೋವಾಕ್ಸಿನ್ ಲಸಿಕೆ ಡೆಲ್ಟಾ ಪ್ಲಸ್ ವಿರುದ್ಧ ಶೇಕಡಾ 65.2ರಷ್ಟು ಪರಿಣಾಮಕಾರಿ ಎನ್ನುತ್ತಿದೆ ವರದಿ.
ಸದ್ಯ ಮಾರುಕಟ್ಟೆಯಲ್ಲಿರುವ ಇತರ ಲಸಿಕೆಗೆ ಹೋಲಿಸಿದರೆ ಡೆಲ್ಟಾ ಪ್ಲಸ್ ವಿರುದ್ಧ ಅತ್ಯಂತ ಪರಿಣಾಮಕಾರಿ ಲಸಿಕೆ ಅನ್ನೋ ಹೆಗ್ಗಳಿಕೆಗೆ ಭಾರತದ ಕೋವಾಕ್ಸಿನ್ ಪಾತ್ರವಾಗಿದೆ. ಇದರೊಂದಿಗೆ ಭಾರತದಲ್ಲಿ ಡೆಲ್ಟಾ ಪ್ಲಸ್ ಹರಡುವಿಕೆಗೆ ಕಡಿವಾಣ ಹಾಕಲು ಈ ಲಸಿಕೆ ಮಹತ್ವದ ಪಾತ್ರ ನಿರ್ವಹಿಸಲಿದೆ.
ಕೋವಾಕ್ಸಿನ್ ಲಸಿಕೆ ಪರಿಣಾಮಕಾರಿ ಹಾಗೂ ಫಲಿತಾಂಶ ಆಧರಿಸಿ ಈಗಾಗಲೇ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. EUA ರಾಷ್ಟ್ರಗಳು, ಪಿಲಿಫೈನ್ಸ್, ಬ್ರೆಜಿಲ್ ಸೇರಿದಂತೆ 15 ರಾಷ್ಟ್ರಗಳು ಕೋವಾಕ್ಸಿನ್ ಲಸಿಕೆ ಬಳಕೆ ಮಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾದಿದೆಯ ಗಂಡಾಂತರ..?