Select Your Language

Notifications

webdunia
webdunia
webdunia
webdunia

ಬೆಂಗಳೂರು IISC ಲಸಿಕೆ ಡೆಲ್ಟಾಗೂ ರಾಮಬಾಣ

ಬೆಂಗಳೂರು IISC ಲಸಿಕೆ ಡೆಲ್ಟಾಗೂ ರಾಮಬಾಣ
ನವದೆಹಲಿ , ಶನಿವಾರ, 17 ಜುಲೈ 2021 (10:32 IST)
ನವದೆಹಲಿ (ಜು.17):  ಜಗತ್ತಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಕೊರೋನಾ ವೈರಸ್ ತಡೆಯಲು ಅಭಿವೃದ್ಧಿಪಡಿಸಲಾಗಿರುವ ‘ಬೆಚ್ಚಗಿನ ಲಸಿಕೆ’ ಡೆಲ್ಟಾಸೇರಿದಂತೆ ಎಲ್ಲಾ ರೀತಿಯ ಕೋವಿಡ್ ರೂಪಾಂತರಿಗಳಿಂದಲೂ ರಕ್ಷಣೆ ನೀಡುತ್ತದೆ ಎಂದು ಆಸ್ಪ್ರೇಲಿಯಾ ತಜ್ಞರು ನಡೆಸಿದ ಸಂಶೋಧನೆಯೊಂದರಲ್ಲಿ ಸಾಬೀತಾಗಿದೆ.

•ಜಗತ್ತಿನ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಭಾರತೀಯ ವಿಜ್ಞಾನ
•ಕೊರೋನಾ ವೈರಸ್ ತಡೆಯಲು ಅಭಿವೃದ್ಧಿಪಡಿಸಲಾಗಿರುವ ‘ಬೆಚ್ಚಗಿನ ಲಸಿಕೆ’
•ಡೆಲ್ಟಾಸೇರಿದಂತೆ ಎಲ್ಲಾ ರೀತಿಯ ಕೋವಿಡ್ ರೂಪಾಂತರಿಗಳಿಂದಲೂ ರಕ್ಷಣೆ ನೀಡುತ್ತದೆ

ಐಐಎಸ್ಸಿ ವಿಜ್ಞಾನಿಗಳು ಮಿನ್ವ್ಯಾಕ್ಸ್ ಎಂಬ ಬಯೋಟೆಕ್ ಸ್ಟಾರ್ಟಪ್ ಸಂಸ್ಥೆಯ ಜೊತೆಗೂಡಿ ಲಸಿಕೆ ಅಭಿವೃದ್ಧಿಪಡಿಸಿದ್ದಾರೆ. ಇಲಿಗಳ ಮೇಲೆ ಇದನ್ನು ಪ್ರಯೋಗಿಸಿ ಯಶ ಸಾಧಿಸಲಾಗಿತ್ತು. ಇದನ್ನು ಫ್ರಿಜ್ನಲ್ಲಿ ಇರಿಸುವ ಅಗತ್ಯವಿಲ್ಲ. 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲೂ ಇದು ತಿಂಗಳುಗಟ್ಟಲೆ ಕೆಡದೆ ಉಳಿಯುತ್ತದೆ. 100 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ 90 ನಿಮಿಷ ಸುರಕ್ಷಿತವಾಗಿರುತ್ತದೆ. ಅದಕ್ಕೇ ಇದಕ್ಕೆ ‘ಬೆಚ್ಚಗಿನ ಲಸಿಕೆ’ ಎನ್ನಲಾಗುತ್ತದೆ. ಫೈಜರ್ನಂತಹ ಲಸಿಕೆಯನ್ನು ಮೈನಸ್ 70 ಡಿಗ್ರಿಯಲ್ಲೂ, ಭಾರತಲ್ಲಿ ನೀಡುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು 2ರಿಂದ 8 ಡಿಗ್ರಿ ಉಷ್ಣಾಂಶದಲ್ಲೂ ಶೇಖರಿಸಬೇಕು.
ಅಮೆರಿಕದಲ್ಲಿ ಮತ್ತೆ ಕೊರೊನಾ ಅಬ್ಬರ: ಲಸಿಕೆ ಪ್ರಮಾಣ ಕಡಿಮೆ ಇರುವೆಡೆ ಭಾರೀ ಹೆಚ್ಚಳ!
ಇಲಿಗಳ ಮೇಲೆ ಪ್ರಯೋಗಿಸಲಾಗಿರುವ ಐಐಎಸ್ಸಿ ಲಸಿಕೆ ಮಾನವರ ಮೇಲಿನ ಪ್ರಯೋಗದಲ್ಲೂ ಯಶಸ್ವಿಯಾದರೆ ಭಾರತದಂತಹ ಉಷ್ಣವಲಯದ ದೇಶಕ್ಕೆ, ಅದರಲ್ಲೂ ಶೈತ್ಯಾಗಾರಗಳಿಲ್ಲದ ಕುಗ್ರಾಮಗಳಿಗೆ ಲಸಿಕೆ ಪೂರೈಸುವುದು ಬಹಳ ಸುಲಭವಾಗಲಿದೆ.
ಸಂಶೋಧನೆಯ ಫಲಿತಾಂಶ ಏನು?:  ಈ ಲಸಿಕೆಯ ಕುರಿತು ಆಸ್ಪ್ರೇಲಿಯಾದ ಸಂಶೋಧಕರು ಹಾಗೂ ಇಂಡಸ್ಟ್ರಿಯಲ್ ರೀಸಚ್ರ್ ಆರ್ಗನೈಸೇಶನ್ ಜಂಟಿಯಾಗಿ ಅಧ್ಯಯನವೊಂದನ್ನು ನಡೆಸಿದೆ. ಅದರಲ್ಲಿ ಈ ಲಸಿಕೆಯು ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾವೈರಸ್ಗಳ ವಿರುದ್ಧ ಪ್ರಬಲವಾದ ಪ್ರತಿಕಾಯಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿದೆ. ಹೀಗಾಗಿ ಸದ್ಯಕ್ಕಿರುವ ಎಲ್ಲಾ ರೀತಿಯ ಕೊರೋನಾ ರೂಪಾಂತರಿಗಳಿಗೂ ಈ ಲಸಿಕೆ ರಾಮಬಾಣವಾಗಿದೆ ಎಂದು ಎಸಿಎಸ್ ಸಾಂಕ್ರಾಮಿಕ ರೋಗಗಳ ಜರ್ನಲ್ನಲ್ಲಿ ಪ್ರಕಟಿಸಿರುವ ಸಂಶೋಧನಾ ಪ್ರಬಂಧದಲ್ಲಿ ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಮೂರನೇ ಅಲೆ ತಡೆಯಲು ಸರ್ಕಾರದ ಸಿದ್ಧತೆ ಶುರು